
ಬೇರೆ ಭಾಷೆ ಸಿನಿಮಾಗಳಲ್ಲಿ ಜನಪ್ರಿಯರಾದ ನಟಿಯರನ್ನು ಸ್ಯಾಂಡಲ್‌ವುಡ್‌ಗೆ ಕರೆತರುವ ರೂಢಿ ಮೊದಲಿನಿಂದಲೂ ಇದೆ. ಆ ರೀತಿ ಬಂದು ಕನ್ನಡದಲ್ಲಿ ಯಶಸ್ವಿಯಾದ ನಟಿಯರು ಸಾಕಷ್ಟಿದ್ದಾರೆ. ಇದೀಗ ತಮಿಳು ನಟಿ ಐಶ್ವರ್ಯಾ ಶರ್ಮಾ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಳೆದ ವರ್ಷ ತೆರೆಕಂಡ ತಮಿಳಿನ ‘ಡ್ಯೂಡ್’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ಐಶ್ವರ್ಯಾ ಶರ್ಮಾ ಕನ್ನಡದಲ್ಲಿ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಶಾನ್ವಿ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾಕ್ಕೆ ಲಿಯೋ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
‘ಶಾನ್ವಿ ಎಂಟರ್‌ಟೈನ್ಮೆಂಟ್ ಈ ಹಿಂದೆ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಸೇರಿದಂತೆ ಕೆಲ ಸಿನಿಮಾಗಳನ್ನು ನಿರ್ಮಿಸಿತ್ತು. ನಿರ್ಮಾಣ ಸಂಸ್ಥೆಯ ನಾಲ್ಕನೆ ಚಿತ್ರದಲ್ಲಿ ಐಶ್ವರ್ಯಾ ನಾಯಕಿಯಾಗಿದ್ದು, ಉಳಿದ ಪಾತ್ರವರ್ಗವನ್ನು ಶೀಘ್ರದಲ್ಲಿಯೇ ಘೋಷಿಸುತ್ತೇವೆ. ಈ ತಿಂಗಳಿನಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ನಿರ್ಮಾಪಕ ದೀಪು ಬಿ.ಎಸ್ ಹೇಳಿದ್ದಾರೆ.
ಚಿತ್ರಕ್ಕೆ ರವೀಶ್ ಆರ್.ಸಿ ಅವರ ಕಥೆ, ಚಿತ್ರಕಥೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.