ADVERTISEMENT

ಆರ್‌ಆರ್‌ಆರ್‌ ಚಿತ್ರೀಕರಣಕ್ಕೆ ಮರಳಿದ ಅಜಯ್‌ ದೇವಗನ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 10:20 IST
Last Updated 30 ನವೆಂಬರ್ 2020, 10:20 IST
ಅಜಯ್‌ ದೇವಗನ್‌
ಅಜಯ್‌ ದೇವಗನ್‌   

ಟ್ರಿಪಲ್‌ ಆರ್‌ (ಆರ್‌ಆರ್‌ಆರ್‌) ಚಿತ್ರ ತಂಡಕ್ಕೆ ಬಾಲಿವುಡ್‌ ನಟ ಅಜಯ್‌ ದೇವಗನ್ ಮರಳಿ ಬಂದಿದ್ದಾರೆ.

ಟ್ರಿಪಲ್‌ ಆರ್‌ ಚಿತ್ರದಲ್ಲಿ ಅಜಯ್‌ ಅವರದ್ದು ಪ್ರಮುಖ ಪಾತ್ರ ಇದೆ. ಇದರ ಮುಖ್ಯ ಭಾಗಗಳ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರೆ. ಲಾಕ್‌ಡೌನ್‌ ಜಾರಿಗೆ ಬಂದಾಗ ಅಜಯ್‌ ಅವರು ಚಿತ್ರೀಕರಣದಿಂದ ವಾಪಸಾಗಿದ್ದರು. ಈಗ ಮರಳಿದ್ದು, ಉಳಿದ ಭಾಗಗಳನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ.

2ರಲ್ಲಿ ಮಕ್ಕಿ (ತೆಲುಗಿನ ‘‌ಈಗ’ ಚಿತ್ರದ ಹಿಂದಿ ಅವತರಣಿಕೆ) ಚಿತ್ರಕ್ಕೆ ಕಂಠದಾನ (ವಾಯ್ಸ್‌ ಓವರ್‌) ನೀಡಲು ಕೋರಿ ನಿರ್ಮಾಪಕ ರಾಜಾಮೌಳಿ ಅವರು ಅಜಯ್‌ ದೇವಗನ್‌ ಮತ್ತು ಕಾಜೊಲ್‌ ಅವರನ್ನು ಭೇಟಿಯಾಗಿದ್ದರಂತೆ. ಚಿತ್ರಕ್ಕೆ ಈ ಜೋಡಿ ಕಂಠದಾನ ನೀಡಿತ್ತು.೮ವರ್ಷಗಳ ಅಂತರದ ಬಳಿಕ ಮತ್ತೆ ರಾಜಾಮೌಳಿ ಅವರ ಜೊತೆ ಅಜಯ್‌ ದೇವಗನ್‌ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಅಜಯ್‌ ಅವರು ಈಗಾಗಲೇ ಹೈದರಾಬಾದ್‌ಗೆ ಬಂದಿದ್ದಾರೆ. ಸಿನಿಮಾ ಚಿತ್ರೀಕರಣ ಮುಂದುವರಿದಿದೆ.

ಆರ್‌ಆರ್‌ಆರ್‌ ಚಿತ್ರದಲ್ಲಿ ದೇವಗನ್‌ ಅವರು ಶ್ರಿಯಾ ಶರಣ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದ ಫ್ಲ್ಯಾಷ್‌ಬ್ಯಾಕ್‌ ನಿರೂಪಣೆಯ ದೃಶ್ಯದಲ್ಲಿ ದೇವಗನ್‌ ಮತ್ತು ಶ್ರಿಯಾ ಅವರ ಪಾತ್ರವಿದೆ. ಅಲಿಯಾ ಭಟ್‌, ಒಲಿವಿಯಾ ಮೊರಿಸ್‌ ಅವರೂ ಕೂಡಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.