ADVERTISEMENT

ಮತ್ತೆ ಒಂದಾದ ಅಜಯ್‌– ಅಭಿಷೇಕ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:30 IST
Last Updated 11 ಆಗಸ್ಟ್ 2019, 19:30 IST
ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್   

ಏಳು ವರ್ಷಗಳ ನಂತರ ಅಜಯ್‌ ದೇವಗನ್‌ ಹಾಗೂ ಅಭಿಷೇಕ್‌ ಬಚ್ಚನ್‌ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅಜಯ್‌ ದೇವಗನ್‌ ಮೂರು – ನಾಲ್ಕು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಅಭಿಷೇಕ್‌ ಬಚ್ಚನ್‌ ಜೊತೆ ಏಳು ವರ್ಷಗಳ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದು ಇವರಿಬ್ಬರು ಒಟ್ಟಾಗಿ ನಟಿಸುತ್ತಿರುವ ಐದನೇ ಚಿತ್ರ.2012ರಲ್ಲಿ ಬಿಡುಗಡೆಯಾದ ‘ಬೋಲ್‌ ಬಚ್ಚನ್‌’ ಈ ಜೋಡಿ ಅಭಿನಯದ ಕೊನೆಯ ಚಿತ್ರ. ಇದಲ್ಲದೇ ಎಲ್‌ಒಸಿ ಕಾರ್ಗಿಲ್‌ (2003), ಜಮೀನ್‌ (2003), ಯುವ (2004) ಚಿತ್ರಗಳಲ್ಲಿ ನಟಿಸಿದ್ದರು.ಈ ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರಕತೆಯನ್ನು ಅಜಯ್‌ ತುಂಬ ಇಷ್ಟಪಟ್ಟು ತಕ್ಷಣವೇ ನಟಿಸಲು ಒಪ್ಪಿಕೊಂಡಿದ್ದಾರಂತೆ. 1999 ಹಾಗೂ 2000ರಲ್ಲಿ ನಡೆದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ನಡೆದ ಮಹತ್ತರ ಬದಲಾವಣೆಗಳ ಸತ್ಯಘಟನೆಗಳು ಈ ಸಿನಿಮಾ ಕತೆಯ ಮೂಲಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರಕ್ಕೆ ಅಜಯ್‌ ದೇವಗನ್‌ ಅವರೇ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

ADVERTISEMENT

ಇದರಲ್ಲಿ ಇಲಿಯಾನಾ ಡಿ ಕ್ರೂಸ್‌ ಅವರು ಅಜಯ್‌ ದೇವಗನ್‌ ಜೊತೆ ಜೋಡಿಯಾಗಿ ನಟಿಸಲಿದ್ದಾರೆ. ಅಜಯ್‌ ಜೊತೆಗೆ ಇಲಿಯಾನಾ ‘ಬಾದ್‌ಷಾ’ ಹಾಗೂ ‘ರೇಡ್‌’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

ಈ ಸಿನಿಮಾ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ.

ಅಜಯ್‌ ದೇವಗನ್‌ ಮೂರು ಬಹುತಾರಾಗಣದ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸದ್ಯ ‘ಭುಜ್‌– ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪರಿಣಿತಿ ಚೋಪ್ರಾ, ರಾನಾ ದಗ್ಗುಬಾಟಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ತಾನಾಜಿ– ದಿ ಅನ್‌ಸಂಗ್‌ ವಾರಿಯರ್‌' ಚಿತ್ರದಲ್ಲಿ ಪತ್ನಿ ಕಾಜೊಲ್‌ ಹಾಗೂ ಸೈಫ್‌ ಆಲಿ ಖಾನ್‌ ಜೊತೆ ನಟಿಸುತ್ತಿದ್ದಾರೆ. ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪಾತ್ರ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.