ನಟ ಅಜಯ್ ರಾವ್ ಜನ್ಮದಿನದ ಅಂಗವಾಗಿ ಹೊಸ ಚಿತ್ರ ಘೋಷಣೆಯಾಗಿದೆ. ಈ ಹಿಂದೆ ‘ಮಳೆ’ ಚಿತ್ರವನ್ನು ನಿರ್ದೇಶಿಸಿದ್ದ ಶಿವತೇಜಸ್ ಹೆಸರಿಡದ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ. ಹೆಚ್‌ಪಿಆರ್ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಹರೀಶ್ ದೇವಿತಂದ್ರೆ ಬಂಡವಾಳ ಹೂಡುತ್ತಿದ್ದಾರೆ.
‘ಈ ಹಿಂದೆ ನಾನು ನಿರ್ದೇಶಿಸಿದ ‘ಧೈರ್ಯಂ’ ಚಿತ್ರದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿದ್ದರು. ‘ದಿಲ್ ಪಸಂದ್’ ಚಿತ್ರದಲ್ಲಿ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುತ್ತೇವೆ’ ಎಂದು ನಿರ್ದೇಶ ಶಿವತೇಜಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.