ADVERTISEMENT

ಬೋನಿಕಪೂರ್‌ ಚಿತ್ರದಲ್ಲಿ ಅಜಿತ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:31 IST
Last Updated 21 ಅಕ್ಟೋಬರ್ 2019, 19:31 IST
.
.   

‘ಪಿಂಕ್‌’ ಚಿತ್ರದ ತಮಿಳು ರಿಮೇಕ್‌ ‘ನೇರ್ಕೊಂಡ ಪಾರ್ವೈ’ ಬಿಡುಗಡೆ ನಂತರ ನಟ ಅಜಿತ್‌ ಯಾವ ಸಿನಿಮಾಕ್ಕೂ ಸಹಿ ಮಾಡಿರಲಿಲ್ಲ. ಅಭಿಮಾನಿಗಳು ಹಾಗೂ ಸಿನಿಪ್ರಿಯರು ಅವರ ಮುಂದಿನ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಈಗ ಅಜಿತ್‌ ಅವರ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಈ ಸಿನಿಮಾವನ್ನೂ ಬೋನಿ ಕಪೂರ್‌ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇದು ಆ್ಯಕ್ಷನ್‌ ಚಿತ್ರ ಎನ್ನಲಾಗಿದೆ.

ಈ ಚಿತ್ರಕ್ಕೆ ಇನ್ನೂ ಟೈಟಲ್‌ ಇಟ್ಟಿಲ್ಲ. ಹಾಗೇ ಈ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಬೋನಿಕಪೂರ್‌ ಮನೆಯಲ್ಲಿಯೇ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರ 2020ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಅಜಿತ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.

ADVERTISEMENT

ಇತ್ತೀಚೆಗೆ ವಿಮಾನನಿಲ್ದಾಣದಲ್ಲಿ ಅಜಿತ್‌ ಕೂದಲು ಕಪ್ಪಗಾಗಿಸಿಕೊಂಡು ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.