ADVERTISEMENT

Puneeth Rajkumar Movie | ಮಾರ್ಚ್‌ 13ಕ್ಕೆ ‘ಆಕಾಶ್‌’

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 0:30 IST
Last Updated 6 ಜನವರಿ 2026, 0:30 IST
ಪುನೀತ್‌ ರಾಜ್‌ಕುಮಾರ್‌ 
ಪುನೀತ್‌ ರಾಜ್‌ಕುಮಾರ್‌    

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಆಕಾಶ್‌’ ಸಿನಿಮಾ ಮಾರ್ಚ್‌ 13ರಂದು ರೀರಿಲೀಸ್‌ ಆಗಲಿದೆ. ಈ ಕುರಿತು ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ. 

2024ರಲ್ಲಿ ಪುನೀತ್‌ ಜನ್ಮದಿನದ ಸಂದರ್ಭದಲ್ಲಿ(ಮಾರ್ಚ್‌ 17) ‘ಜಾಕಿ’ ಸಿನಿಮಾ ರೀರಿಲೀಸ್‌ ಆಗಿತ್ತು. 2025ರಲ್ಲಿ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿ ನಟಿಸಿದ್ದ ಮೊದಲ ಸಿನಿಮಾ ‘ಅಪ್ಪು’ ಮರುಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು. ಈ ವರ್ಷ ‘ಆಕಾಶ್‌’ ತೆರೆ ಕಾಣುತ್ತಿದೆ. ಈ ಮೂಲಕ ಪ್ರತಿ ವರ್ಷವೂ ಅಪ್ಪು ಅವರ ಸಿನಿಮಾವನ್ನು ಪಿಆರ್‌ಕೆ ಪ್ರೊಡಕ್ಷನ್ಸ್‌ ರೀರಿಲೀಸ್‌ ಮಾಡುತ್ತಿದೆ. 

ಸುಮಾರು 21 ವರ್ಷಗಳ ಹಿಂದೆ ತೆರೆಕಂಡಿದ್ದ ಈ ಸಿನಿಮಾವನ್ನು ಮಹೇಶ್‌ ಬಾಬು ನಿರ್ದೇಶಿಸಿದ್ದರು. 200ಕ್ಕೂ ಅಧಿಕ ದಿನ ಚಿತ್ರಮಂದಿರಗಳಲ್ಲಿ ಓಡಿದ್ದ ಈ ಸಿನಿಮಾ ಮಹೇಶ್‌ ಬಾಬು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ರಮ್ಯಾ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾವನ್ನು ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.