ಮುಂಬೈ: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಕೈಜೋಡಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್,ಪ್ರಧಾನಿ ನರೇಂದ್ರ ಮೋದಿ ಅವರ ‘ಪಿಎಂ–ಕೇರ್ಸ್’ ನಿಧಿಗೆ ₹25 ಕೋಟಿ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ.
ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿಪ್ರಧಾನ ಮಂತ್ರಿ –ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚ್ಯುಯೇಷನ್ ಫಂಡ್ (ಕೇರ್ಸ್) ರಚಿಸಿರುವ ಕುರಿತು ಮೋದಿ ಶನಿವಾರ ತಿಳಿಸಿದ್ದರು. ಈ ನಿಧಿಗೆ ದೇಣಿಗೆ ನೀಡುವ ಮುಖಾಂತರ ಜನರೂ ಈ ಹೋರಾಟಕ್ಕೆ ಕೈಜೋಡಿಸಬಹುದು ಎಂದು ಅವರು ತಿಳಿಸಿದ್ದರು.
‘ಪ್ರಸ್ತುತ ನಮ್ಮ ಜನರ ಜೀವನವೇ ಮುಖ್ಯವಾಗಿದೆ. ಪಿಎಂ–ಕೇರ್ಸ್ ನಿಧಿಗೆ ₹25 ಕೋಟಿ ನೀಡುವ ಪ್ರಮಾಣ ಮಾಡುತ್ತಿದ್ದೇನೆ. ಜೀವ ಉಳಿಸೋಣ, ಜೀವವಿದ್ದರೆ ಜಗತ್ತು ಇರಲಿದೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದೇ ರೀತಿ ದಿನಗೂಲಿ ನೌಕರರಿಗಾಗಿ ₹50 ಲಕ್ಷ ದೇಣಿಗೆಯನ್ನು ನಟ ರಜನೀಕಾಂತ್ ಇತ್ತೀಚೆಗೆ ಘೋಷಿಸಿದ್ದರು. ಜೊತೆಗೆ ನಟರಾದ ಹೃತಿಕ್ ರೋಶನ್, ಕಪಿಲ್ ಶರ್ಮಾ, ಪ್ರಭಾಸ್, ಮಹೇಶ್ ಬಾಬು, ಪವಲ್ ಕಲ್ಯಾಣ್, ರಾಮ್ ಚರಣ್ ಸೇರಿದಂತೆ ಹಲವು ನಟರೂ ದೇಣಿಗೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.