ADVERTISEMENT

'ಅಲಾ ವೈಕುಂಠಪುರಮುಲೋ' ಟೀಸರ್‌ ಬಿಡುಗಡೆ: 20 ಗಂಟೆಯಲ್ಲಿ 61 ಲಕ್ಷ ಜನ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 7:34 IST
Last Updated 12 ಡಿಸೆಂಬರ್ 2019, 7:34 IST
   

ಹೈದರಾಬಾದ್‌: ತೆಲುಗಿನ ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ‘ಅಲಾ ವೈಕುಂಠಪುರಮುಲೋ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. 20 ಗಂಟೆಗಳಲ್ಲಿ 61ಲಕ್ಷ ಜನವೀಕ್ಷಣೆ ಮಾಡಿರುವುದು ತೆಲುಗು ಚಿತ್ರರಂಗದಲ್ಲೇ ದಾಖಲೆಯಾಗಿದ್ದುಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ.

ಟಾಲಿವುಡ್‌ ಚಿತ್ರರಂಗದ ‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ಅಲಾ ವೈಕುಂಠಪುರಮುಲೋ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾರಿ ನಿರೀಕ್ಷೆಹುಟ್ಟುಹಾಕಿರುವ ಈ ಸಿನಿಮಾ ಬರುವ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಈ ಹಿಂದೆ ಚಿತ್ರತಂಡ ಸಾಮಜವರಗಮನ ಹಾಡನ್ನು‘ಪ್ರೊಮೊ ಸಾಂಗ್‌’ ರೂಪದಲ್ಲಿಯೂಟ್ಯೂಬ್‌ಗೆ ಸೇರಿಸಿತ್ತು. ಈ ಹಾಡುಒಂದೇ ದಿನದಲ್ಲಿ ಸುಮಾರು 92 ಲಕ್ಷ ಜನ ವೀಕ್ಷಿಸಿದ್ದು, ಮೂರು ಲಕ್ಷ ಲೈಕ್ಸ್ ಪಡೆದಿರುವುದು ದಾಖಲೆಯಾಗಿತ್ತು.‘ಸಿರಿವೆನ್ನೆಲ’ ಸೀತಾರಾಮಶಾಸ್ತ್ರಿ ಬರೆದ ಸಾಮಜವರಗಮನ ಹಾಡಿಗೆತಮನ್ ಎಸ್‌. ಎಸ್‌. ಸ್ವರ ಸಂಯೋಜನೆ ಮಾಡಿದ್ದುಗಾಯಕ ಸಿದ್‌ ಶ್ರೀರಾಮ್‌ ಹಾಡಿದ್ದಾರೆ.

ADVERTISEMENT

ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಕನ್ನಡದಪೂಜಾ ಹೆಗ್ಡೆ ನಟಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಅಲ್ಲು ಅರ್ಜುನ್‌ ಮಾಸ್ ಮತ್ತು ಕಾರ್ಪೋರೆಟ್‌ ನೌಕರನ ಲುಕ್‌ನಲ್ಲಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಕಾರ್ಪೋರೆಟ್‌ ದಲ್ಲಾಳಿಗಳು ಮತ್ತು ಗ್ರಾಮೀಣ ಪ್ರದೇಶದ ಮುಗ್ಧ ಜನರ ನಡುವಿನ ಕಥ ಹಂದರದ ಎಳೆ ಈ ಟೀಸರ್‌ ನೋಡಿದವರಿಗೆ ಕಾಣಿಸದೇ ಇರದು.

ಕುಡುಗೋಲಿನಲ್ಲಿ ಸಿಗರೇಟ್‌ ಹೊತ್ತಿಸಿಕೊಂಡು, ಕೈಯಲ್ಲಿ ಕೋಳಿ ಹಿಡಿಯುವ ಗ್ರಾಮೀಣ ಯುವಕರ ಶೈಲಿಯ ಲುಕ್‌ ಅಭಿಮಾನಿಗಳ ಮನಗೆದ್ದಿದ್ದೆ. ನಾಯಕಿ ಪೂಜಾ ಹೆಗ್ಡೆ ಕೂಡ ಸಾಫ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಟಬು, ವೆನ್ನೆಲ ಕಿಶೋರ್‌, ರಾಜೇಂದ್ರ ಪ್ರಸಾದ್‌, ಎನ್‌.ಪೇತುರಾಜ್‌, ಸುನೀಲ್‌, ನವದೀಪ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಲ್ಲು ಅರ್ಜುನ್‌ ಜೊತೆಗೂಡಿಜುಲಾಯಿ, ಸನ್‌ ಆಫ್‌ ಸತ್ಯಮೂರ್ತಿ ಯಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ತ್ರಿವಿಕ್ರಮ್‌ ಈಗಅಲಾ ವೈಕುಂಠಪುರಮುಲೋ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ನೀಡಲು ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.