ADVERTISEMENT

ಆಲಿಯಾ ಭಟ್‌-ರಣಬೀರ್ ಕಪೂರ್ ಮದುವೆ: ಮೆಹಂದಿ ಕಾರ್ಯಕ್ರಮದ ಫೋಟೊಗಳು ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2022, 9:59 IST
Last Updated 16 ಏಪ್ರಿಲ್ 2022, 9:59 IST
ಆಲಿಯಾ ಭಟ್‌-ರಣಬೀರ್ ಕಪೂರ್ ಮದುವೆ
ಆಲಿಯಾ ಭಟ್‌-ರಣಬೀರ್ ಕಪೂರ್ ಮದುವೆ   

ಮುಂಬೈ:ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮೊನ್ನೆಯಷ್ಟೇ ಅವರ ಮದುವೆಯ ಫೋಟೊಗಳು ವೈರಲ್ ಆಗಿದ್ದವು.

ಇದೀಗ ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆ ಮುಂಚಿನ ಮೆಹಂದಿ ಕಾರ್ಯಕ್ರಮದ ಫೋಟೊಗಳನ್ನು ಹಂಚಿಕೊಂಡು ಭಾವನಾತ್ಮಕ ಸಂದೇಶ ಹಾಕಿದ್ದಾರೆ.

‘ಮೆಹಂದಿ ಕಾರ್ಯಕ್ರಮ ಅದೊಂದು ಕಂಡ ಕನಸಿಗಿಂತಲೂ ಸುಂದರವಾಗಿ ನಡೆದ ಸಂಗತಿಯಾಗಿತ್ತು. ಕುಟುಂಬದವರು, ಆಪ್ತ ಸ್ನೇಹಿತರು ಸೇರಿ ಸಂಭ್ರಮಪಟ್ಟಿದ್ದು ಪದಗಳಲ್ಲಿ ಹೇಳಲಾಗದು. ಕಪೂರ್ ಫ್ಯಾಮಿಲಿ ಜೊತೆ ಈ ಕ್ಷಣ ತುಂಬಾ ಭಾವನಾತ್ಮಕವಾಗಿತ್ತು’ ಎಂದು ಆಲಿಯಾ ಹೇಳಿದ್ದಾರೆ. ಅದರೊಂದಿಗೆ ಮೆಹಂದಿ ಕಾರ್ಯಕ್ರಮಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಬಾಂದ್ರಾದಲ್ಲಿರುವ ರಣಬೀರ್‌ ಅವರ 'ವಾಸ್ತು' ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನೆರವೇರಿದೆ.ಸಂಭ್ರಮದಲ್ಲಿ ಫೋಟೊಗಳನ್ನು ಆಲಿಯಾ ಮತ್ತು ರಣಬೀರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವ ದಂಪತಿಗೆ ಬಾಲಿವುಡ್‌ ನಟ –ನಟಿಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.

ಆಲಿಯಾ ಭಟ್, ರಣಬೀರ್ ಕಪೂರ್ ಅವರಿಗೆ 'ಜೀವಮಾನದ ಪ್ರೀತಿ ಮತ್ತು ಸಂತೋಷ' ಎಂದು ಪ್ರಿಯಾಂಕಾ ಚೋಪ್ರಾ ಶುಭ ಹಾರೈಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ರಣಬೀರ್ ಮತ್ತು ಆಲಿಯಾ ಫೋಟೊ ಹಂಚಿಕೊಂಡಿರುವ ಪ್ರಿಯಾಂಕಾ, ‘ನಿಮ್ಮಿಬ್ಬರಿಗೂ ಅಭಿನಂದನೆಗಳು.. ಸದಾ ಪ್ರೀತಿ, ಸಂತೋಷ ನಿಮ್ಮದಾಗಲಿ’ ಎಂದು ಬರೆದುಕೊಂಡಿದ್ದಾರೆ.

ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿದ್ದರು.
ನೀತು ಕಪೂರ್, ಕರೀನಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಕರಿಷ್ಮಾ ಕಪೂರ್, ಕರಣ್ ಜೋಹರ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.