ADVERTISEMENT

ಪ್ರಭಾಸ್‌ ಅಭಿಮಾನಿ ಪಟ್ಟಿಗೆ ಆಲಿಯಾ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:30 IST
Last Updated 8 ಏಪ್ರಿಲ್ 2020, 19:30 IST
ಪ್ರಭಾಸ್‌
ಪ್ರಭಾಸ್‌   

‘ಬಾಹುಬಲಿ’ ಸರಣಿ ಚಿತ್ರಗಳ ನಂತರ ತೆಲುಗು ನಟ ಪ್ರಭಾಸ್‌ ಅಭಿಮಾನಿಗಳ ಬಳಗ ದೊಡ್ಡದಾಗುತ್ತಿದೆ. ಈ ಪಟ್ಟಿಗೆ ಜನಸಾಮಾನ್ಯರಷ್ಟೇ ಅಲ್ಲ, ಸ್ಟಾರ್‌ ನಟಿಯರು ಸೇರ್ಪಡೆಯಾಗುತ್ತಿದ್ದಾರೆ. ಈಗ ಬಾಲಿವುಡ್‌ ನಟಿ ಆಲಿಯಾ ಭಟ್‌ ‘ನಾನು ಪ್ರಭಾಸ್‌ ಅವರ ದೊಡ್ಡ ಅಭಿಮಾನಿ’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಅವರೇ ಈ ವಿಷಯ ಹೇಳಿಕೊಂಡಿದ್ದಾರೆ. ‘ನಾನು ಪ್ರಭಾಸ್‌ ಅವರನ್ನು ತುಂಬಾ ಇಷ್ಟಪಡುತ್ತೇನೆ’ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಪ್ರಭಾಸ್‌ ಮತ್ತು ಆಲಿಯಾ ಅಭಿಮಾನಿಗಳು ತಪ್ಪು ಭಾವಿಸುವಂತಿಲ್ಲ. ಈಗಾಗಲೇ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಮದುವೆ ನಿಶ್ಚಯವಾಗಿದೆ.

ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ‘ಬಾಹುಬಲಿ’ ಚಿತ್ರದಲ್ಲಿನ ಅದ್ದೂರಿತಾಂತ್ರಿಕತೆಯು ಹೊಸ ಅಲೆಯನ್ನು ಸೃಷ್ಟಿಸಿಲ್ಲ. ಪ್ರಭಾಸ್‌ ಅವರ ಅದ್ಭುತ‌ ನಟನೆ‌ಯೇ ಬಾಲಿವುಡ್‌ನಲ್ಲಿ ಮುಂಚೂಣಿಯಲ್ಲಿರುವ ನಟಿಯರು ಅವರ ಅಭಿಮಾನಿಗಳನ್ನಾಗಿ ಮಾಡಿದೆ ಎಂದು ಹೇಳಬೇಕಿಲ್ಲ.

ADVERTISEMENT

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರದಲ್ಲೂ ಆಲಿಯಾ ನಟಿಸುತ್ತಿದ್ದಾರೆ. ಈಗ ಕೊರೊನಾ ಸೋಂಕಿನ ಕಾರಣಕ್ಕೆ ಇದರ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಆಲಿಯಾ ಈ ಚಿತ್ರದಿಂದ ಹೊರಗುಳಿಯಬಹುದು ಎನ್ನುವ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿಬಂದಿದ್ದು ಉಂಟು.

ಆದರೆ, ಚಿತ್ರತಂಡ ಟ್ವಿಟರ್‌ನಲ್ಲಿ ‘ಆರ್‌ಆರ್‌ಆರ್‌’ ಚಿತ್ರದ ಮೋಷನ್‌ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಆಕೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸಂದೇಶ ರವಾನಿಸಿದೆ.

ಬಿಗ್‌ ಬಜೆಟ್‌ನ ಈ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌ ಹಾಗೂ ಅಜಯ್‌ ದೇವಗನ್‌ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.