ಬಾಲಿವುಡ್ ತಾರೆಯರಾದ ಆಲಿಯಾ ಭಟ್–ರಣಬೀರ್ ಕಪೂರ್ ತಮ್ಮ ಪುತ್ರಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಜನಿಸಿದ ಮಗಳಿಗೆ ‘ರಾಹಾ’ ಎಂದು ಹೆಸರಿಟ್ಟಿರುವುದಾಗಿ ಅಲಿಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೇಳಿದ್ದಾರೆ.
ಜೊತೆಗೆ ‘ರಾಹಾ’ ಹೆಸರಿನ ಅರ್ಥ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ‘ರಾಹಾ’ ಎಂಬ ಹೆಸರು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಅರ್ಥ ಹೊಂದಿದೆ.‘ರಾಹಾ’ ಎಂದರೆ ಪರಿಶುದ್ಧವಾದ ದೈವಿಕ ಮಾರ್ಗ ಎಂದರ್ಥ. ಸಂಸ್ಕೃತದಲ್ಲಿ ‘ರಾಹಾ’ ಎಂದರೆ ಕುಲ. ವಿಶ್ರಾಂತಿ, ಆರಾಮದಾಯಕ, ಶಾಂತ, ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂಬ ಅರ್ಥಗಳನ್ನು ಹೊಂದಿದೆ. ಆಕೆಯಲ್ಲಿ ಇವೆಲ್ಲ ಗುಣಗಳು ಇವೆ. ನಮ್ಮ ಕುಟುಂಬದ ಭಾಗವಾಗಿದ್ದಕ್ಕೆ ಧನ್ಯವಾದಗಳು. ನಮ್ಮ ಬದುಕು ಈಗಷ್ಟೇ ಆರಂಭವಾಗಿರುವ ಭಾವನೆ ಮೂಡುತ್ತಿದೆ’ ಎಂದು ಆಲಿಯಾ ಭಟ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಏಪ್ರಿಲ್ 14ರಂದು ಆಲಿಯಾ–ರಣಬೀರ್ ವಿವಾಹವಾಗಿದ್ದರು. ನವೆಂಬರ್ 06 ರಂದು ಆಲಿಯಾ ಭಟ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.