ಹಲವು ತಿಂಗಳುಗಳಿಂದ ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರಿಷಿ ಕಪೂರ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಂಬೈನ ತಮ್ಮ ಮನೆಗೆ ಮರಳಿದ್ದಾರೆ. ಅಸ್ಥಿಮಜ್ಜೆ (ಬೋನ್ ಮ್ಯಾರೊ) ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಬಂದ ಅವರನ್ನು ಮಗ ರಣಬೀರ್ ಕಪೂರ್ ಹಾಗೂ ಮಗಳು ರಿದ್ಧಿಮಾ ಸಂತಸದಿಂದ ಸ್ವಾಗತಿಸಿಕೊಂಡಿದ್ದರು. ಈಗ ನಟಿ ಆಲಿಯಾ ಭಟ್ ರಿಷಿ ಕಪೂರ್‌ಗಾಗಿ ವಿಶೇಷ ಸೆಲಬ್ರೇಷನ್ ಪಾರ್ಟಿಯೊಂದನ್ನು ಆಯೋಜಿಸಿದ್ದು ಬಿ–ಟೌನ್‌ನಲ್ಲಿ ಸುದ್ದಿಯಾಗಿದೆ.
ಆಲಿಯಾ ಹಾಗೂ ರಣಬೀರ್ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಬಾಲಿವುಡ್‌ನಲ್ಲಿ ಸುದ್ದಿ ಹರಡಿದೆ. ಇತ್ತೀಚೆಗೆ ರಿಷಿ ಕಪೂರ್ ಭಾರತಕ್ಕೆ ವಾಪಸ್ಸಾದಾಗ ಆಲಿಯಾ, ರಿಷಿ ಕಪೂರ್ ಮನೆಯಲ್ಲಿಯೇ ಇದ್ದು ಅವರನ್ನು ಸ್ವಾಗತಿಸಿದ್ದರು. ಈಗ ತಮ್ಮ ತಂದೆ ಮಹೇಶ್ ಭಟ್ ಮನೆಯಲ್ಲಿ ಸ್ಪೆಷಲ್ ಗೆಟ್– ಟುಗೆದರ್ ಪಾರ್ಟಿಯನ್ನು ರಿಷಿ ಕಪೂರ್‌ಗಾಗಿ ಆಲಿಯಾ ಆಯೋಜಿಸಿದ್ದಾರೆ.
ಈ ಸುದ್ದಿಯಿಂದಾಗಿ ಮತ್ತೊಮ್ಮೆ ಅಲಿಯಾ– ರಣಬೀರ್ ಮದುವೆ ವಿಚಾರ ಸುದ್ದಿಯಲ್ಲಿದೆ. ಇತ್ತೀಚೆಗೆ ರಿಷಿ ಕಪೂರ್ ಅವರ 67ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಲಿಯಾ ಹಾಗೂ ರಣಬೀರ್ ಅವರ ಫೋಟೊಶಾಫ್ ಮಾಡಿರುವ ಮದುವೆ ಚಿತ್ರಗಳು ಭಾರಿ ವೈರಲ್ ಆಗಿದ್ದವು.
ತಮ್ಮ ಮದುವೆಯ ಬಗ್ಗೆ ರಣಬೀರ್ ಕಪೂರ್, ಮಹೇಶ್ ಭಟ್ ಅವರ ಜೊತೆ ಮಾತುಕತೆ ನಡೆಸಿದ್ದು, 2020ಕ್ಕೆ ಈ ಜೋಡಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಎರಡೂ ಕುಟುಂಬದ ಸದಸ್ಯರು ಏನೂ ಸ್ಪಷ್ಟನೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.