ADVERTISEMENT

ಎನ್​ಟಿಆರ್ ವೃತ್ತಿಪರತೆಗೆ ನಟಿ ಆಲಿಯಾ ಭಟ್‌ ಫಿದಾ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 11:36 IST
Last Updated 15 ಫೆಬ್ರುವರಿ 2022, 11:36 IST
ಆಲಿಯಾ, ಎನ್‌ಟಿಆರ್‌
ಆಲಿಯಾ, ಎನ್‌ಟಿಆರ್‌   

ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಭಟ್, ಜ್ಯೂ.ಎನ್​ಟಿಆರ್, ರಾಮ್‌ಚರಣ್‌ ನಟಿಸಿದ್ದಾರೆ. ಸಿನಿಮಾ ಇನ್ನು ಕೆಲವು ದಿನಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರದ ಕೆಲಸಗಳು ನಡೆಯುತ್ತಿವೆ. ಈ ನಡುವೆ ಆಲಿಯಾ ಭಟ್ ಅವರು ಎನ್‌ಟಿಆರ್‌ ವೃತ್ತಿಪರತೆ ಹಾಗೂ ಅವರ ಅಭಿಮಾನಿಗಳ ಪ್ರೀತಿಯನ್ನು ಕೊಂಡಾಡಿದ್ದಾರೆ.

ಪಿಂಕ್‌ವಿಲ್ಲಾ ಸುದ್ದಿಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಎನ್‌ಟಿಆರ್‌ ಅವರನ್ನು ಹೊಗಳಿದ್ದಾರೆ.

ADVERTISEMENT

ಎನ್‌ಟಿಆರ್‌ ಅವರ ಅಭಿಮಾನಿಗಳ ಬಳಗ ದೊಡ್ಡದಾಗಿ ಬೆಳೆಯುತ್ತಿದ್ದೆ. ಅದರ ವ್ಯಾಪ್ತಿ ಉತ್ತರ ಭಾರತಕ್ಕೂ ಹರಡಿದೆ. ಸಿನಿಮಾದ ಬಗ್ಗೆ ಅವರಿಗಿರುವ ವೃತ್ತಿಪರತೆ ಮತ್ತುಕಾರ್ಯವೈಖರಿಯೇ ಅವರ ಅಭಿಮಾನಿಗಳ ಬಳಗ ದೊಡ್ಡದಾಗಲೂ ಕಾರಣ ಎಂದು ಹೇಳಿದ್ದಾರೆ.

ಎನ್‌ಟಿಆರ್‌ ಅಭಿಮಾನಿಗಳ ನಿಷ್ಠೆಯನ್ನು ಹೊಗಳಿರುವ ಆಲಿಯಾ, ’ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟು ಬಿಡಿ’ ಎಂದು ಹೇಳಿದ್ದಾರೆ. ಅವರ ಸಂದರ್ಶನದ ಮಾತುಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.

ಟಾಲಿವುಡ್‌ನಲ್ಲಿ ಅವಕಾಶ ಸಿಕ್ಕರೆ, ನಾನು ಎನ್‌ಟಿಆರ್‌, ಅಲ್ಲು ಅರ್ಜುನ್‌ ಜತೆ ನಟಿಸುವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.