ADVERTISEMENT

'ಬುಟ್ಟ ಬೊಮ್ಮಾ' ಹಾಡಿಗೆ ಕುಣಿದ ಆನೆ: ಅಲ್ಲು ಅರ್ಜುನ್ ಅಭಿಮಾನಿಯ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 7:02 IST
Last Updated 10 ಮಾರ್ಚ್ 2020, 7:02 IST
   

ಹೈದರಾಬಾದ್‌: ತೆಲುಗಿನ ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಚಿತ್ರದ 'ಬುಟ್ಟ ಬೊಮ್ಮಾ' ಹಾಡಿಗೆ ಆನೆ ಹೆಜ್ಜೆ ಹಾಕಿರುವುದು ವೈರಲ್‌ ಆಗಿದೆ.

ಇತ್ತೀಚೆಗೆ ಬಿಡುಗಡೆಯಾಗಿದಅಲಾ ವೈಕುಂಠಪುರಮುಲೋ ಸಿನಿಮಾ ಮಾಸ್‌ ಹಿಟ್‌ ಆಗಿದ್ದುಅಲ್ಲು ಅರ್ಜುನ್‌ ಅವರಿಗೆಹೊಸ ಬ್ರೇಕ್‌ ನೀಡಿದೆ. ತಮನ್‌ ಸಂಗೀತ ಸಂಯೋಜಿಸಿರುವಈ ಸಿನಿಮಾದ ಹಾಡುಗಳು ಕೂಡ ಸಖತ್ ಹಿಟ್‌ ಆಗಿದ್ದವು.

ಅಲ್ಲು ಅರ್ಜುನ್‌ ಅಭಿಮಾನಿಯೊಬ್ಬ ಬುಟ್ಟ ಬೊಮ್ಮಾ ಹಾಡಿಗೆ ಹೆಜ್ಜೆ ಹಾಕಿ ಟಿಕ್‌ ಟಾಕ್‌ ವಿಡಿಯೊ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲು ಅಭಿಮಾನಿ ಹೆಜ್ಜೆ ಹಾಕುತ್ತಿದ್ದರೆ ಹಿಂಬಂದಿಯಲ್ಲಿದ್ದ ಆನೆ ಕೂಡ ಸೊಂಡಿಲು ಆಡಿಸುತ್ತ ಹೆಜ್ಜೆ ಹಾಕುತ್ತದೆ. ಈ ವಿಡಿಯೊಗೆ ಅಲ್ಲು ಅಭಿಮಾನಿಗಳು ಫಿದಾ ಆಗಿದ್ದು ಲಕ್ಷಾಂತರ ಜನರುಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ADVERTISEMENT

ಬುಟ್ಟ ಬೊಮ್ಮಾ ವಿಡಿಯೊ ಸಾಂಗ್‌ ಯುಟ್ಯೂಬ್‌ನಲ್ಲಿ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಈ ಸಿನಿಮಾವನ್ನುನಿರ್ದೇಶನ ಮಾಡಿದ್ದಾರೆ.

ನೆಟ್ಟಿಗರುಮನಗೆದ್ದಿರುವ ಆನೆ ನೃತ್ಯದ ವಿಡಿಯೊಗೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.