ಮೆಗಾಸ್ಟಾರ್ ಚಿರಂಜೀವಿ
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾಗೆ ನಟ ಅಲ್ಲು ಅರ್ಜುನ್ ಅಭಿನಂದಿಸಿದ್ದಾರೆ. ಈ ವೇಳೆ ಕನ್ನಡದ ಸಾಲುಗಳನ್ನು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಜನವರಿ 12ರಂದು ಬಿಡುಗಡೆಯಾಗಿದೆ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡದ ಡೈಲಾಗ್ ಹೇಳಿದ್ದಾರೆ. ಹೀಗಾಗಿ ವೆಂಕಟೇಶ್ ಅವರಿಗೆ ಅಲ್ಲು ಅರ್ಜುನ್ ಕನ್ನಡದ ಸಾಲುಗಳಲ್ಲಿ ‘ತುಂಬಾ ಚೆನ್ನಾಗಿ ಮಾಡಿದಿರಾ’ ಎಂದು ಬರೆದು ಅಭಿನಂದಿಸಿದ್ದಾರೆ.
‘ಮನ ಶಂಕರ ವರ ಪ್ರಸಾದ್ ಗಾರು ಚಿತ್ರತಂಡಕ್ಕೆ ಅಭಿನಂದನೆಗಳು. ಬಾಸ್ ಮತ್ತೆ ಬಂದಿದ್ದಾರೆ. ನಮ್ಮ ಮೆಗಾಸ್ಟಾರ್ ಅವರನ್ನು ಪರದೆಯ ಮೇಲೆ ನೋಡಿ ಸಂತೋಷವಾಯಿತು. ಇದು ಕೇವಲ ಸಂಕ್ರಾಂತಿಯ ಬ್ಲಾಕ್‌ಬಸ್ಟರ್ ಅಲ್ಲ, ಸಂಕ್ರಾಂತಿಯ ಬಾಸ್-ಬಸ್ಟರ್’ ಎಂದು ಬರೆದಿದ್ದಾರೆ.
ಬಹುದಿನಗಳ ನಂತರ ಚಿರಂಜೀವಿ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಸಿನಿಮಾವು ಈ ವರೆಗೆ ₹250 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.