ADVERTISEMENT

ವೆಬ್‌ಸರಣಿಯಲ್ಲಿ ಜ್ಯೂನಿಯರ್ ಬಚ್ಚನ್‌

‘ಬ್ರೀದ್‌– ಇನ್‌ ಟು ದ ಶ್ಯಾಡೊಸ್‌’ನಲ್ಲಿ ಅಭಿಷೇಕ್‌ ಬಚ್ಚನ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 9:12 IST
Last Updated 22 ಜೂನ್ 2020, 9:12 IST
‘ಬ್ರೀದ್‌– ‌ಬ್ರೀದ್ ಇನ್‌ ಟು ಶ್ಯಾಡೊಸ್‌’ ವೆಬ್‌ಸರಣಿ ಫಸ್ಟ್‌ಲುಕ್
‘ಬ್ರೀದ್‌– ‌ಬ್ರೀದ್ ಇನ್‌ ಟು ಶ್ಯಾಡೊಸ್‌’ ವೆಬ್‌ಸರಣಿ ಫಸ್ಟ್‌ಲುಕ್   

‘ಬ್ರೀದ್‌– ‌ಇನ್‌ ಟು ದ ಶ್ಯಾಡೊಸ್‌’ ವೆಬ್‌ಸರಣಿ ಮೂಲಕ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ!

ಅಮೆಜಾನ್ ಪ್ರೈಮ್‌ ವಿಡಿಯೊ ನಿರ್ಮಿಸುತ್ತಿರುವ ಈ ಕುತೂಹಲಭರಿತ ವೆಬ್‌ಸರಣಿಯ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ಜ್ಯೂನಿಯರ್‌ ಬಚ್ಚನ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.‌

ನಟ ಮಾಧವನ್‌ ಅಭಿನಯದ ‘ಬ್ರೀದ್‌’‌ ವೆಬ್‌ಸರಣಿ ಭಾರಿ ಯಶಸ್ಸು ಕಂಡ ಬೆನ್ನಲ್ಲೇ ಅಮೆಜಾನ್‌ ಪ್ರೈಮ್‌ ವಿಡಿಯೊ ಈಗ‘ಬ್ರೀದ್–‌ ಇನ್‌ ಟು ದ ಶ್ಯಾಡೊಸ್‌’ ವೆಬ್‌ಸರಣಿ ನಿರ್ಮಿಸಿದೆ. ಮೊದಲ ಸೀಸನ್‌ನಂತೆಯೇ ಈ ಸೀಸನ್‌ ಕೂಡ ಕ್ರೈಂ ಥ್ರಿಲ್ಲರ್‌ ಕತೆ ಹೊಂದಿದೆ ಎನ್ನಲಾಗಿದೆ.

ADVERTISEMENT

ಇದರಲ್ಲಿ ಅಭಿಷೇಕ್ ಬಚ್ಚನ್‌‌ ಹಿರಿಯ ಪೊಲೀಸ್‌ ಅಧಿಕಾರಿ ಕಬೀರ್‌ ಸಾವಂತ್‌ ಪಾತ್ರ ನಿರ್ವಹಿಸಿದ್ದಾರೆ. ಮಗು ಕಾಣೆಯಾದ ‘ಮಿಸ್ಸಿಂಗ್‌’ ಪೋಸ್ಟರ್ ಕೈಯಲ್ಲಿ ‌ಹಿಡಿದು ಕುಳಿತಅಭಿಷೇಕ್‌ ಬಚ್ಚನ್ ಫಸ್ಟ್‌ಲುಕ್ ಗಮನ ಸೆಳೆಯುವಂತಿದೆ.

ಗಾಢವಾಗಿ ಆಲೋಚನೆ ಮಾಡುತ್ತ ಕುಳಿತ ಗಂಭೀರ ಮುಖಭಾವದ ಅಭಿಷೇಕ್‌ ಪೋಸ್ಟರ್‌ನಲ್ಲಿ‘ತಂದೆಯ ಪ್ರೀತಿ ಜೀವ ಉಳಿಸಬಹುದು, ಇಲ್ಲವೇ ಯಾರ ಜೀವವನ್ನು ಬೇಕಾದರೆ ತೆಗೆಯಬಹುದು’ ಎಂಬ ಅಡಿ ಬರಹ ಕಾಣುತ್ತದೆ.

ಈ ಸರಣಿಯೂ ‘ಬ್ರೀದ್‌‌’ ಸರಣಿ ರೀತಿಯಲ್ಲಿಯೇ ಥ್ರಿಲ್ಲರ್‌ ಕತೆ ಹೊಂದಿರಬಹುದು ಎಂಬುದನ್ನು ಧ್ವನಿಸುತ್ತದೆ. ಆದರೆ, ಈ ವೆಬ್‌ಸರಣಿಯುಸಂಪೂರ್ಣ ಹೊಸ ಕತೆ ಹೊಂದಿದೆ ಎಂದು ತಂಡ ಹೇಳಿಕೊಂಡಿದೆ.

ಜುಲೈ 10ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ. ಅಬಂಡಂಷಿಯಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಮಾಡಿದೆ. ಅಮಿತ್ ಸಾದ್, ನಿತ್ಯಾ ಮೆನನ್‌, ಸಯಾಮಿ ಖೇರ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.ಮಾಯಂಕ್ ಶರ್ಮಾ ರಚನೆ, ನಿರ್ದೇಶನವಿದೆ. ಭವಾನಿ ಅಯ್ಯರ್, ವಿಕ್ರಮ್ ಟುಲಿ,ಅರ್ಷದ್ ಸೈಯದ್ ಮತ್ತು ಮಾಯಂಕ್ ಶರ್ಮಾ ಚಿತ್ರಕತೆ ಬರೆದಿದ್ದಾರೆ.

ಥ್ರಿಲ್ಲರ್‌ ಕತೆಯ ‘ಬ್ರೀದ್’ಸರಣಿಯಲ್ಲಿ ಮಾಧವನ್‌ ಫುಟ್‌ಬಾಲ್‌ ಕೋಚ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಗನನ್ನು ಬದುಕಿಸಲು ಅಪಾಯಕಾರಿ ಮಾರ್ಗ ಆಯ್ದುಕೊಳ್ಳುವ ಅಪ್ಪನ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.