ADVERTISEMENT

Maarigallu Web Series: ಜೀ5ನಲ್ಲಿ ‘ಮಾರಿಗಲ್ಲು’ ವೆಬ್‌ಸರಣಿ ಶೀಘ್ರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 23:39 IST
Last Updated 23 ಸೆಪ್ಟೆಂಬರ್ 2025, 23:39 IST

ಜೀ5ನಲ್ಲಿ ‘ಮಾರಿಗಲ್ಲು’ ವೆಬ್‌ಸರಣಿ ಶೀಘ್ರ

ಜೀ5ನಲ್ಲಿ ‘ಮಾರಿಗಲ್ಲು’ ವೆಬ್‌ಸರಣಿ ಶೀಘ್ರ

ಈಗಾಗಲೇ ‘ಅಯ್ಯನ ಮನೆ’, ‘ಶೋಧ’ ವೆಬ್‌ಸರಣಿಗಳ ಮೂಲಕ ಸದ್ದು ಮಾಡಿರುವ ಜೀ5 ಇದೀಗ ಮತ್ತೊಂದು ಕನ್ನಡ ವೆಬ್‌ಸರಣಿ ಘೋಷಿಸಿದೆ. ಕೆಆರ್‌ಜಿ ಸ್ಟುಡಿಯೊಸ್‌ ಸಹಯೋಗದಲ್ಲಿ ‘ಶೋಧ’ ವೆಬ್‌ಸರಣಿಯನ್ನು ಪ್ರೇಕ್ಷಕರೆದುರಿಗೆ ತಂದಿದ್ದ ಜೀ5 ಈ ಬಾರಿ ‘ಪಿಆರ್‌ಕೆ ಪ್ರೊಡಕ್ಷನ್ಸ್‌’ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್‌ಸರಣಿ ತರಲಿದೆ.

ADVERTISEMENT

‘ಈ ವೆಬ್‌ ಸರಣಿಯು ಕರ್ನಾಟಕದ ಜನಪದವನ್ನು ಹೇಳುವ‌ ಒಂದು ದೈವಿಕ ಥ್ರಿಲ್ಲರ್ ಆಗಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರಲಿದೆ. ಕದಂಬರ ಆಳ್ವಿಕೆಯ ಕಾಲದ ಕಥೆಯನ್ನು ಹೊಂದಿರುವ ಈ ಕಥೆಯು, ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ತೆರೆ ಮೇಲೆ ತರಲಿದೆ. ಕದಂಬರ ಕಾಲದಿಂದಲೂ ‘ಮಾರಿ’ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕಳವು ಮತ್ತು ಹುಡುಕಾಟದ ಸುತ್ತ ಇಡೀ‌ ಕಥೆಯನ್ನು ಹೆಣೆಯಲಾಗಿದೆ. ಕಥೆಯೊಳಗಿರುವ ಪಾತ್ರಗಳು ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುವುದು ಕಥಾಹಂದರ’ ಎಂದಿದೆ ತಂಡ.

‘ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ ಮತ್ತು ಅಂತಹ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. ‘ಮಾರಿಗಲ್ಲು’ ಇಂಥ ಒಂದು ಕಥೆಯಾಗಿದೆ. ಇದು ಪ್ರತಿಯೊಬ್ಬರೂ ಕಣ್ಣರಳಿಸಿ ನೋಡುವಂತಹ ಥ್ರಿಲ್ಲರ್ ಕಥೆಯಾಗಲಿದೆ’ ಎಂದಿದ್ದಾರೆ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.