ADVERTISEMENT

11ನೇ ಮಗುವಿನ ನಿರೀಕ್ಷೆಯಲ್ಲಿ ಅಮೆರಿಕ ಗಾಯಕಿ ಕೇಕೆ ವ್ಯಾಟ್...

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 11:47 IST
Last Updated 23 ಫೆಬ್ರುವರಿ 2022, 11:47 IST
ಗಾಯಕಿ ಕೇಕೆ ವ್ಯಾಟ್ ಕುಟುಂಬ
ಗಾಯಕಿ ಕೇಕೆ ವ್ಯಾಟ್ ಕುಟುಂಬ   

ಅಮೆರಿಕದ ಪಾಪ್‌ ಗಾಯಕಿ ಕೇಕೆ ವ್ಯಾಟ್ ಅವರು 11ನೇ ಮಗುವಿಗೆ ತಾಯಿಯಾಗುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

39ರಹರೆಯದ ಕೇಕೆ ವ್ಯಾಟ್‌ ಅವರು ಪತಿ ಜಕಕರಿಯಾ ಡೇವಿಡ್ ಹಾಗೂ 10 ಮಕ್ಕಳ ಜೊತೆಗೆ ಇರುವ ಫೋಟೊವನ್ನು ಹಂಚಿಕೊಂಡು 11 ನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಕೇಕೆ ವ್ಯಾಟ್‌ ಹಂಚಿಕೊಂಡಿರುವ ಫೋಟೊದಲ್ಲಿ ಅವರ ಹತ್ತು ಮಕ್ಕಳೂ ’ನಾವು ಅಣ್ಣ, ಅಕ್ಕ ಆಗುತ್ತಿದ್ದೇವೆ’ ಎಂದು ಸೂಚಿಸುವ ಬಿಳಿ ಬಣ್ಣದ ಟೀ ಶರ್ಟ್‌ ಧರಿಸಿಕೊಂಡಿದ್ದಾರೆ. ಈ ಪೋಟೊದಲ್ಲಿ ಕೇಕೆ ವ್ಯಾಟ್‌ ಮತ್ತು ಜಕಕರಿಯಾ ಡೇವಿಡ್ ಅವರನ್ನು ಕಾಣಬಹುದು.

ADVERTISEMENT

ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಕೇಕೆ ವ್ಯಾಟ್ಯ್‌ಗೆ ಅಭಿನಂದಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೇಕೆ ವ್ಯಾಟ್​ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿದ್ದರು. ಆ ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಕೆಂಪು ಬಣ್ಣದ ಉಡುಗೆಯಲ್ಲಿ ಅವರು ಮಿಂಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.