ADVERTISEMENT

‘ಗುಲಾಬೊ ಸಿತಾಬೊ’ ಸಿನಿಮಾ ಪ್ರಚಾರಅಮಿತಾಭ್, ಆಯುಷ್ಮಾನ್‌ ಟಂಗ್ ಟ್ವಿಸ್ಟರ್‌ ಸವಾಲು

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 4:14 IST
Last Updated 11 ಜೂನ್ 2020, 4:14 IST
ಗುಲಾಬೊ ಸಿತಾಬೊ ಚಿತ್ರದ ದೃಶ್ಯ
ಗುಲಾಬೊ ಸಿತಾಬೊ ಚಿತ್ರದ ದೃಶ್ಯ   

ಬಾಲಿವುಡ್‌ ಮೆಗಾ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಹಾಗೂ ನಟ ಆಯುಷ್ಮಾನ್‌ ಖುರಾನಾ ಬಾಲಿವುಡ್‌ನ ನಟ– ನಟಿಯರಿಗೆ ಟಂಗ್‌ ಟ್ವಿಸ್ಟರ್‌ ಸವಾಲನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ನೀಡಿದ್ದಾರೆ.

ಅಮಿತಾಭ್‌ ಹಾಗೂ ಆಯುಷ್ಮಾನ್‌ ನಟನೆಯ ‘ಗುಲಾಬೊ ಸಿತಾಬೊ’ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ಜೂನ್‌ 12ರಂದು ಪ್ರಸಾರವಾಗಲಿದೆ. ಈಗ ಈ ಚಿತ್ರದ ಪ್ರಚಾರವನ್ನು ಸೋಶಿಯಲ್‌ ಮೀಡಿಯಾಗಳ ಮೂಲಕ ಮಾಡುತ್ತಿರುವ ಈ ಇಬ್ಬರು ನಟರು, ಅದರ ಭಾಗವಾಗಿ ಬಾಲಿವುಡ್‌ ಮಂದಿಗೆ ಟಂಗ್‌ ಟ್ವಿಸ್ಟರ್‌ ಸವಾಲು ಎಸೆದಿದ್ದಾರೆ.

ಈ ಸವಾಲನ್ನು ಸ್ವೀಕರಿಸಿದವರು ಸತತ ಐದು ನಿಮಿಷಗಳ ಕಾಲ ಅಥವಾ ಕನಿಷ್ಟ ಐದು ಬಾರಿಯಾದರೂ ಅವರು ಹೇಳಿರುವ ಟಂಗ್‌ ಟ್ವಿಸ್ಟರ್‌ ಸಾಲುಗಳನ್ನು ಉಚ್ಚರಿಸಬೇಕು. ನಂತರ ಉಳಿದವರಿಗೆ ಈ ಸವಾಲು ಸ್ವೀಕರಿಸುವಂತೆ ಅವರನ್ನು ನಾಮಿನೇಟ್‌ ಮಾಡಬೇಕು. ಟಂಗ್‌ ಟ್ವಿಸ್ಟರ್‌ ಸಾಲುಗಳನ್ನು ಕೂಡ ಅಮಿತಾಭ್‌ ಬಚ್ಚನ್‌ ಹಾಗೂ ಆಯುಷ್ಮಾನ್‌ ಖುರಾನಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವು ಹೀಗಿವೆ:“Gulabo ki khatar-patar se titar-bitar Sitabo
Sitabo ke agar-magar se uthal-puthal Gulabo”

ADVERTISEMENT

ಅಮಿತಾಭ್‌ ಅವರು ಆಯುಷ್ಮಾನ್‌ ಖುರಾನಾ, ದೀಪಿಕಾ ಪಡುಕೋಣೆ, ರಣಬೀರ್‌ ಕಪೂರ್‌, ಆಲಿಯಾ ಭಟ್‌, ವಿರಾಟ್‌ ಕೊಹ್ಲಿ, ಭೂಮಿ ಪಡ್ನೇಕರ್‌, ಕಾರ್ತಿಕೇಯನ್‌ ಅವರಿಗೆ ಸವಾಲು ಎಸೆದಿದ್ದರೆ,ಕರಣ್‌ ಜೋಹರ್‌, ವರುಣ್‌ ಧವನ್‌, ಅರ್ಜುನ್‌ ಕಪೂರ್‌, ತಾಪ್ಸಿ ಪನ್ನುಗೆ ಆಯುಷ್ಮಾನ್‌ ಸವಾಲು ಸ್ವೀಕರಿಸುವಂತೆ ಹೇಳಿದ್ದಾರೆ.

ಅಮಿತಾಭ್‌ ಸವಾಲನ್ನು ಸ್ವೀಕರಿಸಿದ ಆಯುಷ್ಮಾನ್‌, ತಡವರಿಸದೇ ಪದಗಳನನ್ಉ ಉಚ್ಚರಿಸಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.ಇನ್ನು ವರುಣ್‌ ಧವನ್‌ ‘ನಾನು ಇದನ್ನು ಮೊದಲು ಬರೆದು, ನಂತರ ಹೇಳುತ್ತೇನೆ’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರೆ, ಭೂಮಿ ಪಡ್ನೇಕರ್‌ ‘ಓಹ್‌, ಇದು ಕಷ್ಟದ ಕೆಲಸ ಎಂದು ಹೇಳಿದ್ದರೆ, ಕಾರ್ತಿಕೇಯ ‘ಸರ್‌, ನಾನು ನಾಳೆ ಹೇಳುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.