ADVERTISEMENT

'ಅನಂತ ಪದ್ಮನಾಭ’ನಾದ ರಿಷಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 23:28 IST
Last Updated 28 ಜನವರಿ 2026, 23:28 IST
ಪ್ರಕಾಶ್‌ ಬೆಳವಾಡಿ, ರಿಷಿ 
ಪ್ರಕಾಶ್‌ ಬೆಳವಾಡಿ, ರಿಷಿ    

‘ಆಪರೇಷನ್‌ ಅಲಮೇಲಮ್ಮ’, ‘ಕವಲುದಾರಿ’ ಸಿನಿಮಾ ಖ್ಯಾತಿಯ ನಟ ರಿಷಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ‘ಮಂಗಳಾಪುರಂ’ ಹಾಗೂ ‘ಜವರ’ ಸಿನಿಮಾ ಘೋಷಣೆಯಾಗಿತ್ತು. ಇದೀಗ ನಟ ಪ್ರಕಾಶ್‌ ಬೆಳವಾಡಿಯವರ ಜೊತೆ ಲಾಂಗ್‌ಡ್ರೈವ್‌ಗೆ ಹೊರಡಲು ಸಜ್ಜಾಗಿರುವ ರಿಷಿ ‘ಅನಂತ ಪದ್ಮನಾಭ’ನಾಗಿದ್ದಾರೆ. 

‘ಅಧ್ಯಕ್ಷ’, ‘ವಿಕ್ಟರಿ’, ‘ರನ್ನ’, ‘ಪೊಗರು’, ‘ತೀರ್ಥರೂಪ ತಂದೆಯವರಿಗೆ’, ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಪ್ರಶಾಂತ್‌ ರಾಜಪ್ಪ ನಿರ್ದೇಶನ ಮಾಡಿದ್ದಾರೆ. ‘ರಿಷಿ ನಾಯಕನಾಗಿ ಕಾಣಿಸಿಕೊಳ್ಳಲಿರುವ ‘ಅನಂತ ಪದ್ಮನಾಭ’ ಸಿನಿಮಾದಲ್ಲಿ ಪ್ರಕಾಶ್‌ ಬೆಳವಾಡಿ ಅವರದ್ದು ವಿಶೇಷ ಪಾತ್ರ. ನಾಯಕಿಯಾಗಿ ಅಂಜಲಿ ಅನೀಶ್‌ ಬಣ್ಣಹಚ್ಚಿದ್ದಾರೆ’ ಎಂದಿದೆ ಚಿತ್ರತಂಡ. 

‘ಎರಡು ಪೀಳಿಗೆಯ ಬಗ್ಗೆ ಇರುವ ಈ ಸಿನಿಮಾ ಕಥೆಯಲ್ಲಿ ಜೀವನದ ಮೌಲ್ಯಗಳ ಬಗ್ಗೆ ಉಲ್ಲೇಖವಿರಲಿದೆ. ಕಾಮಿಡಿ ಡ್ರಾಮಾ ಜಾನರ್‌ನಲ್ಲಿರುವ ಈ ಸಿನಿಮಾದ ನಿರ್ಮಾಪಕ ಅಮ್ರೇಜ್‌ ಸೂರ್ಯವಂಶಿ. ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ ಎಂದಿದೆ. 

ADVERTISEMENT

‘ಅನಂತ ಪದ್ಮನಾಭ’ ಸಿನಿಮಾವನ್ನು ಬೆಂಗಳೂರು, ಸಾಗರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸಿನಿಮಾಗೆ ಅಶ್ವಿನ್‌ ಪಿ. ಕುಮಾರ್‌ ಸಂಗೀತ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಚಿತ್ರಗ್ರಹಣವಿದೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.