ADVERTISEMENT

ನೋಡಿ–ಅಣ್ಣಾತ್ತೆ ಟೀಸರ್ ಬಿಡುಗಡೆ: ಮೋಡಿ ಮಾಡಿದ ರಜನಿಕಾಂತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2021, 10:37 IST
Last Updated 16 ಅಕ್ಟೋಬರ್ 2021, 10:37 IST
ಅಣ್ಣಾತ್ತೆ ಪೊಸ್ಟರ್
ಅಣ್ಣಾತ್ತೆ ಪೊಸ್ಟರ್   

ಬೆಂಗಳೂರು: ದಸರಾಪ್ರಯುಕ್ತ ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ‘ ಸಿನಿಮಾದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಟೋಸರ್ ಅಣ್ಣಾತ್ತೆಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದ್ದು, ರಜನಿಕಾಂತ್ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 6 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.ರಜನಿಕಾಂತ್‌ ಬಿಳಿ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ ನೀಡಿದ್ದಾರೆ. ರಜನಿಯ ವಿಭಿನ್ನ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌

2020 ರಲ್ಲಿ ಎ.ಆರ್.ಮುರುಘದಾಸ್ ನಿರ್ದೇಶನದ ‘ದರ್ಬಾರ್‘ ಬಿಡುಗಡೆಯಾದ ನಂತರ ರಜನಿಕಾಂತ್ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಕೊರೊನಾ ಲಾಕ್‌ಡೌನ್ ಪರಿಣಾಮದಿಂದ 'ಅಣ್ಣಾತ್ತೆ' ಚಿತ್ರದ ಶೂಟಿಂಗ್ ಮೂರು ಬಾರಿ ಮುಂದಕ್ಕೆ ಹೋಗಿತ್ತು. ಅಲ್ಲದೇ ಒಂದು ಬಾರಿ ರಜನಿ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ADVERTISEMENT

ನವೆಂಬರ್ 4 ರಂದು ದೀಪಾವಳಿ ಹಬ್ಬಕ್ಕೆ ‘ಅಣ್ಣಾತ್ತೆ'ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದು, ನಿರ್ದೇಶಕ ಶಿವಾ ಅವರು ನಿರ್ದೇಶಿಸುತ್ತಿದ್ದಾರೆ. ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನಾಹಾಗೂ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.