ADVERTISEMENT

ಶೀರ್ಷಾಸನದಲ್ಲಿ ಅನುಷ್ಕಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 8:01 IST
Last Updated 1 ಡಿಸೆಂಬರ್ 2020, 8:01 IST
ಶೀರ್ಷಾಸನದಲ್ಲಿ ಅನುಷ್ಕಾ ಶರ್ಮಾ. ನೆರವು ನೀಡಿರುವ ವಿರಾಟ್‌ ಕೊಹ್ಲಿ(ಫೇಸ್‌ಬುಕ್‌ ಚಿತ್ರ)
ಶೀರ್ಷಾಸನದಲ್ಲಿ ಅನುಷ್ಕಾ ಶರ್ಮಾ. ನೆರವು ನೀಡಿರುವ ವಿರಾಟ್‌ ಕೊಹ್ಲಿ(ಫೇಸ್‌ಬುಕ್‌ ಚಿತ್ರ)   

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ, ಗರ್ಭಿಣಿ ಅನುಷ್ಕಾ ಶರ್ಮಾ ಅವರು ಶೀರ್ಷಾಸನ ಹಾಕಿರುವ ಚಿತ್ರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ತಾಣದಲ್ಲಿ ಗಮನ ಸೆಳೆದಿದೆ.

ಶೀರ್ಷಾಸನ ಭಂಗಿಯಲ್ಲಿರುವ ಅವರ ಕಾಲುಗಳನ್ನು ಪತಿ ವಿರಾಟ್‌ ಕೊಹ್ಲಿ ಹಿಡಿದುಕೊಂಡಿದ್ದಾರೆ.

ಈ ಚಿತ್ರಕ್ಕೆ ದೀರ್ಘ ವಿವರಣೆ ಕೊಟ್ಟಿರುವ ಅನುಷ್ಕಾ, ‘ಯೋಗ ನನ್ನ ಜೀವನದ ಭಾಗ. ಆದರೆ, ಈಗನ ಸ್ಥಿತಿಯಲ್ಲಿ ತಲೆಕೆಳಗಾಗಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದರೆ, ನನ್ನ ದೇಹದ ಸಮತೋಲನ ಕಾಯ್ದುಕೊಳ್ಳಲು ಪತಿ ನೆರವಾಗಿದ್ದಾರೆ. ಇದೆಲ್ಲವೂ ನನ್ನ ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಈ ಸಮಯದಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದು ನನಗೆ ಹೆಮ್ಮೆ ಎನಿಸಿದೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.