ADVERTISEMENT

ನಮ್ಮ ನೆರೆಮನೆಯವರಾಗಲಿದ್ದೀರಿ: ಕತ್ರೀನಾ–ವಿಕ್ಕಿಗೆ ಅನುಷ್ಕಾ ಈ ರೀತಿ ಹೇಳಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2021, 6:10 IST
Last Updated 10 ಡಿಸೆಂಬರ್ 2021, 6:10 IST
ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್‌
ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್‌   

ಮುಂಬೈ: ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಜೋಡಿಯುಗುರುವಾರ ದಾಂ‍ಪತ್ಯ ಜೀವನಕ್ಕೆ ಕಾಲಿಟ್ಟಿದೆ.

ವಿವಾಹದ ಚಿತ್ರವನ್ನುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕತ್ರೀನಾ ಕೈಫ್‌ಗೆ ಹಿಂದಿ ಚಿತ್ರರಂಗದ ಖ್ಯಾತನಾಮರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಕತ್ರೀನಾ–ವಿಕ್ಕಿ ಚಿತ್ರವನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಹಂಚಿಕೊಂಡಿರುವ ನಟಿ ಅನುಷ್ಕಾ ಶರ್ಮಾನವ ಜೋಡಿಗೆಶುಭ ಹಾರೈಸಿದ್ದಾರೆ.

ADVERTISEMENT

‘ನಿಮ್ಮಿಬ್ಬರಿಗೂಅಭಿನಂದನೆಗಳು.ನಿಮ್ಮಿಬ್ಬರ ಜೀವನವೂ ಕೊನೆಯವರೆಗೂಪ್ರೀತಿ ಮತ್ತು ಅನ್ಯೋನ್ಯತೆಯಿಂದ ಕೂಡಿರಲಿ ಎಂಬುದಾಗಿ ನಾನು ಬಯಸುತ್ತೇನೆ‘ ಎಂದು ತಿಳಿಸಿದ್ದಾರೆ.

‘ನೀವು ಅಧಿಕೃತವಾಗಿ ಮದುವೆಯಾಗಿದ್ದೀರಿ.ಶೀಘ್ರದಲ್ಲೇ ನಮ್ಮ ನೆರೆಮನೆಯವರಾಗಲಿದ್ದೀರಿ. ಕಟ್ಟಡ ನಿರ್ಮಾಣದ ಸದ್ದುಆದಷ್ಟು ಬೇಗ ಕೊನೆಯಾಗಲಿದೆ‘ ಎಂದು ತಿಳಿಸಿದ್ದಾರೆ.

ನಟಿ ಅನುಷ್ಕಾ ಶರ್ಮಾ ಮತ್ತುಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇದರಹತ್ತಿರವೇ ಇರುವ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಅನ್ನು ಕತ್ರೀನಾ–ವಿಕ್ಕಿ ಜೋಡಿಖರೀದಿಸಿದೆಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.