ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ತಾಯಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಧರಿಸಿದ ಚೆರ್ರಿಕೆಂಪು ಬಣ್ಣದ ಉಡುಗೆ ಇತ್ತೀಚೆಗೆ ಅಭಿಮಾನಿಗಳ ಗಮನ ಸೆಳೆದಿದೆ.
ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ನಡೆಯುತ್ತಿರುವ ಐಪಿಎಲ್ -2020 ಪಂದ್ಯಗಳಲ್ಲಿ ಕೋಹ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಅಭಿಮಾನಿಗಳು ಕರತಾಡನ ಮಾಡುತ್ತಿದ್ದರೆ ಅನುಷ್ಕಾ ಅದೆಲ್ಲವನ್ನೂ ಆನಂದಿಸುತ್ತಲೇ ತಾವೂ ಕೂಡಾ ಸ್ಟೇಡಿಯಂನಲ್ಲಿ ಪತಿಯತ್ತ ಅಭಿನಂದನಾಪೂರ್ವಕವಾಗಿ ನೋಡಿದ್ದು, ತಾಯಿಯಾಗುತ್ತಿರುವ ಸಂತಸ, ಹೊಳಪು ಮುಖದಲ್ಲಿ ಗೋಚರಿಸಿದ್ದು ಥಟ್ಟನೆ ಕ್ಯಾಮೆರಾಗಳ ಗಮನ ಸೆಳೆಯಿತು.
ಕೆಂಪು ಉಡುಗೆ, ಗಾಢವಲ್ಲದ ಲಿಪ್‌ಸ್ಟಿಕ್, ಚಿನ್ನದ ಬಣ್ಣದ ವಾಚ್ ಅಭಿಮಾನಿಗಳಿಗೆ ಹಿಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.