ADVERTISEMENT

ವಿರುಷ್ಕಾ ದಾಂಪತ್ಯಕ್ಕೆ 4 ವರ್ಷ: ಆತ್ಮಸಂಗಾತಿಯ ಕುರಿತು ಅನುಷ್ಕಾ ಬರೆದಿದ್ದೇನು?

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 12:09 IST
Last Updated 11 ಡಿಸೆಂಬರ್ 2021, 12:09 IST
ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ   

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗವಿರಾಟ್ ಕೊಹ್ಲಿ ಅವರ ದಾಂಪತ್ಯ ಜೀವನಕ್ಕೆ ನಾಲ್ಕುವರ್ಷಗಳು ಸಂದಿವೆ.

ಅನುಷ್ಕಾ ಮತ್ತು ವಿರಾಟ್ ಡಿಸೆಂಬರ್ 2017 ರಲ್ಲಿ ಇಟಲಿಯ ಲೇಕ್ ಕೊಮೊ ತೀರದಲ್ಲಿ ವಿವಾಹವಾಗಿದ್ದರು.

ಮದುವೆ ವಾರ್ಷಿಕೋತ್ಸವದ ಸಂಭ್ರದಲ್ಲಿರುವಅನುಷ್ಕಾ ಅವರು ವಿರಾಟ್‌ರೊಂದಿಗೆ ವಿನೋದದಿಂದ ಸಮಯ ಕಳೆಯುತ್ತಿರುವಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ADVERTISEMENT

ಫೋಟೊಗಳೊಂದಿಗೆ ವಿರಾಟ್‌ರನ್ನು ಹೊಗಳಿ ಟಿಪ್ಪಣಿಯೊಂದನ್ನು ಅನುಷ್ಕಾ ಹಂಚಿಕೊಂಡಿದ್ದಾರೆ.

‘ಸುಲಭವಾದ ದಾರಿಯೆಂಬುದಿಲ್ಲ.ಇವುನೀನು(ವಿರಾಟ್‌)ನಂಬಿರುವಪದಗಳು. ಸಂಬಂಧಗಳು ಸೇರಿದಂತೆ ಎಲ್ಲದಕ್ಕೂ ಈ ಪದಗಳು ಅನ್ವಯವಾಗುತ್ತವೆ. ಗ್ರಹಿಕೆಗಳೇತುಂಬಿದ ಜಗತ್ತಿನಲ್ಲಿ ನಿನ್ನ ಹಾಗೇ ಬದುಕಲುಪ್ರಚಂಡ ಧೈರ್ಯ ಬೇಕು. ನನಗೆ ಅಗತ್ಯವಿರುವಾಗ ಸ್ಫೂರ್ತಿ ನೀಡಿದ್ದಕ್ಕಾಗಿ ಮತ್ತು ಆಲಿಸಬೇಕಿರುವ ಸಂದರ್ಭದಲ್ಲಿನಿನ್ನಮನಸ್ಸನ್ನು ತೆರೆದಿಟ್ಟುಕೊಂಡಿದ್ದಕ್ಕಾಗಿಧನ್ಯವಾದಗಳು’ ಎಂದು ತಿಳಿಸಿದ್ದಾರೆ.

‘ಇಬ್ಬರೂ ಸುರಕ್ಷಿತವಾಗಿದ್ದಾಗ ಮಾತ್ರ ಸಮಾನ ಮನಸ್ಕರನಡುವೆಮದುವೆ ಸಾಧ್ಯ. ನೀನುನನಗೆ ತಿಳಿದಿರುವ ಅತ್ಯಂತ ಸುರಕ್ಷಿತ ವ್ಯಕ್ತಿ.ನಾನು ಮೊದಲೇ ಹೇಳಿದಂತೆ, ನಿಜವಾಗಿ ನಿನ್ನನ್ನುತಿಳಿದಿರುವವರು ಅದೃಷ್ಟವಂತರು.ಪ್ರೀತಿ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಗೌರವವು ನಮಗೆ ಯಾವಾಗಲೂ ಮಾರ್ಗದರ್ಶನ ನೀಡಲಿ’ ಎಂದು ನಟಿ ಅನುಷ್ಕಾ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.