ADVERTISEMENT

‘3 ಈಡಿಯಟ್ಸ್‌’ಗೆ ಅನುಷ್ಕಾ ಶರ್ಮಾ ಆಡಿಷನ್: ಹಳೆಯ ವಿಡಿಯೊ ಈಗ ವೈರಲ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 11:35 IST
Last Updated 29 ಏಪ್ರಿಲ್ 2021, 11:35 IST
ವೈರಲ್ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್
ವೈರಲ್ ವಿಡಿಯೊದಿಂದ ತೆಗೆದ ಸ್ಕ್ರೀನ್ ಶಾಟ್   

ನವದೆಹಲಿ: ರಾಜ್‌ಕುಮಾರ್ ಹಿರಾನಿಯ 2009 ರ ಹಿಟ್ ಚಿತ್ರ 3 ಈಡಿಯಟ್ಸ್‌ಗೆ ಅನುಷ್ಕಾ ಶರ್ಮಾ ಆಡಿಷನ್ ಮಾಡಿರುವುದು ನಿಮಗೆ ತಿಳಿದಿದೆಯೇ? ಹೌದು, ಇದು ಸತ್ಯ. ಅನುಷ್ಕಾ ಶರ್ಮಾ ಅವರ ಹಳೆಯ ಆಡಿಶನ್ ವಿಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕ್ಲಿಪ್‌ನಲ್ಲಿ, ಸಂಜಯ್ ದತ್ ಅವರ ಮುನ್ನಾಭಾಯ್ ಎಂಬಿಬಿಎಸ್‌ ಚಿತ್ರದಲ್ಲಿ ಗ್ರೇಸಿ ಸಿಂಗ್ ಅವರ ಡೈಲಾಗ್ ಅನ್ನು ಅನುಷ್ಕಾ ಬಳಸಿದ್ದು, ಗ್ರೀನ್ ಟಾಪ್ ಧರಿಸಿದ್ದಾರೆ. ಆದರೆ, 3 ಈಡಿಯಟ್ಸ್ ಚಿತ್ರಕ್ಕೆ ಅನುಷ್ಕಾ ಆಯ್ಕೆಯಾಗಿರಲಿಲ್ಲ. ಅಮೀರ್ ಖಾನ್, ಆರ್ ಮಾಧವನ್, ಶರ್ಮನ್ ಜೋಶಿ, ಕರೀನಾ ಕಪೂರ್ ಮತ್ತು ಬೊಮನ್ ಇರಾನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಅನುಷ್ಕಾ ಶರ್ಮಾ ಅವರ ಹಲವು ಫ್ಯಾನ್ಸ್ಕ್ಲಬ್‌ಗಳು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿವೆ.

ADVERTISEMENT

ಚೇತನ್ ಭಗತ್ ಅವರ ಕಾದಂಬರಿ ಆಧರಿಸಿದ 3 ಈಡಿಯಟ್ಸ್‌ನಲ್ಲಿ ಅನುಷ್ಕಾ ಶರ್ಮಾ ಅವರಿಗೆ ರಾಜ್ ಕುಮಾರ್ ಹಿರಾನಿ ಮತ್ತು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ, 5 ವರ್ಷಗಳ ನಂತರ, 2014 ರ ಬ್ಲಾಕ್ ಬಸ್ಟರ್ ಪಿಕೆ ಚಿತ್ರದಲ್ಲಿ ಕಾಣಿಸಿಕೊಂಡರು. ಮುನ್ನಾಭಾಯ್ ಎಂಬಿಬಿಎಸ್, 3 ಈಡಿಯಟ್ಸ್ ಮತ್ತು ಪಿಕೆ ಮೂರೂ ಚಲನಚಿತ್ರಗಳನ್ನು ವಿಧು ವಿನೋದ್ ಚೋಪ್ರಾ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.