ADVERTISEMENT

ಸ್ಪಾನಿಷ್ ರಿಮೇಕ್ ಚಿತ್ರದಲ್ಲಿ ‘ಸ್ವೀಟಿ’

ಮತ್ತೊಂದು ಹೊಸಚಿತ್ರದಲ್ಲಿ ‘ಸ್ವೀಟಿ’

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 11:43 IST
Last Updated 9 ಜೂನ್ 2019, 11:43 IST
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ   

‘ಬಾಹುಬಲಿ’ ಸಿನಿಮಾ ಸರಣಿ ಮೂಲಕ ಮನೆಮಾತಾದ ನಟಿ ಅನುಷ್ಕಾ ಶೆಟ್ಟಿ ಈಗ ಹೊಸ ಚಿತ್ರ ‘ಸೈಲೆನ್ಸ್’ನಲ್ಲಿ ಬ್ಯುಸಿಯಾಗಿದ್ದಾರೆ. ‘ಭಾಗಮತಿ’ ನಂತರ ತೂಕ ಇಳಿಸಿಕೊಳ್ಳುವುದಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅನುಷ್ಕಾ, ಅಲ್ಲಿಂದ ಬಂದ ಮೇಲೆ ಹೇಮಂತ್ ಮಧುಕರ್ ಅವರ ‘ಸೈಲೆನ್ಸ್‌’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಾಧವನ್‌ಗೆ ಜೋಡಿಯಾಗಿ ಅವರು ನಟಿಸುತ್ತಿದ್ದಾರೆ.

ಮೊದಲಿನಂತೆ ಮತ್ತೆ ಸಪೂರವಾಗಿರುವ ಅನುಷ್ಕಾ ಈಗಾಗಲೇ ತಮ್ಮ ಆಕರ್ಷಕ ನೋಟದಿಂದ ಅಭಿಮಾನಿಗಳ ಮನಸೆಳೆಯುತ್ತಿದ್ದಾರೆ. ಈ ನಡುವೆ ‘ಸ್ವೀಟಿ’ ಅರ್ಥಾತ್ ಅನುಷ್ಕಾ ಸದ್ದಿಲ್ಲದೇ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರಂತೆ. ಸ್ಪಾನಿಷ್‌ ಭಾಷೆಯ ಥ್ರಿಲ್ಲರ್ ಸಿನಿಮಾ ‘ಜೂಲಿಯಸ್ ಐಸ್‌’ ಸಿನಿಮಾದ ರಿಮೇಕ್‌ನಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಸಹೋದರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಏಕಕಾಲದಲ್ಲಿ ತಮಿಳು, ತೆಲುಗು ಎರಡೂ ಭಾಷೆಗಳಲ್ಲೂ ತಯಾರಾಗುತ್ತಿರುವುದು ವಿಶೇಷ. ಶೀಘ್ರದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿಗಳು ಹೊರಬೀಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT