ADVERTISEMENT

ಅಪ್ಪುವಿನ ಕಟೌಟ್‌ ಡ್ಯಾನ್ಸ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 13:21 IST
Last Updated 2 ನವೆಂಬರ್ 2021, 13:21 IST
   

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರ ಕಟೌಟ್‌ ಡ್ಯಾನ್ಸ್‌ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪುನೀತ್‌ ಅಭಿಮಾನಿಗಳು ಈ ಡ್ಯಾನ್ಸಿಂಗ್‌ ಕಟೌಟ್‌ ಅನ್ನು ನಿರ್ಮಾಣ ಮಾಡಿದ್ದಾರೆ. ಈ ಕಟೌಟ್‌ ಅನ್ನು ಯಾರು ನಿರ್ಮಾಣ ಮಾಡಿದ್ದಾರೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.

ಅಪ್ಪು ಅಭಿಮಾನಿಗಳಂತೂ ಈ ವಿಡಿಯೊವನ್ನು ಶೇರ್ ಮಾಡುತ್ತಿದ್ದಾರೆ. ಕೆಲವರು ಇದು ಹೆಬ್ಬಾಳ ಫ್ಲೈಓವರ್‌ ಬಳಿ ಎಂದು ಇನ್ನು ಕೆಲವರು ನಾಗರಭಾವಿಫ್ಲೈಓವರ್‌ ಬಳಿ ಈ ಡ್ಯಾನ್ಸಿಂಗ್‌ ಕಟೌಟ್‌ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ADVERTISEMENT

ನಟ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಶುಕ್ರವಾರ (ಅ.29ರಂದು) ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.