ADVERTISEMENT

ಅರ್ಜುನ್, ಮಲೈಕಾ ಮದ್ವೆ ಯಾವಾಗ?

​ಪ್ರಜಾವಾಣಿ ವಾರ್ತೆ
Published 29 ಮೇ 2019, 4:06 IST
Last Updated 29 ಮೇ 2019, 4:06 IST
ಮಲೈಕಾ ಅರೋರ, ಅರ್ಜುನ್ ಕಪೂರ್
ಮಲೈಕಾ ಅರೋರ, ಅರ್ಜುನ್ ಕಪೂರ್   

ವಯಸ್ಸಿನ ಅಂತರವಿದ್ದರೂ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಜೋಡಿಯಾಗಿ ವಿಹರಿಸುತ್ತಿರುವುದು ಬಿಟೌನ್‌ನಲ್ಲಿ ಈಗ ಗುಟ್ಟಾಗಿ ಉಳಿದಿಲ್ಲ. ದೇಶವಷ್ಟೇ ಅಲ್ಲ ವಿದೇಶಗಳಿಗೂ ಜೋಡಿಯಾಗಿ ತೆರಳುವ ಈ ಜೋಡಿ ಅಲ್ಲಿ ಕಳೆದ ಸಂತಸದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ಇಷ್ಟೆಲ್ಲಾ ಸುತ್ತಾಡುತ್ತಿರುವ ಈ ಜೋಡಿ ಯಾವಾಗ ಮದುವೆಯಾಗುತ್ತದೆ ಎಂಬುದೇ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ.

ಏಪ್ರಿಲ್ 19ರಂದೇ ಇಬ್ಬರೂ ಮದುವೆಯಾಗುತ್ತಾರೆ ಎಂಬ ಗುಸುಗುಸು ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡಿತಾದರೂ ಇದಕ್ಕೆ ಖಚಿತತೆ ಸಿಗಲಿಲ್ಲ. ಈ ಬಗ್ಗೆ ಮಲೈಕಾ ಅವರನ್ನು ಕೇಳಿದರೆ, ‘ಇದಕ್ಕೆಲ್ಲಾ ಮಾಧ್ಯಮಗಳೇ ಕಾರಣ. ಅವರೇ ಈ ಸುದ್ದಿಯನ್ನು ಹಬ್ಬಿಸಿದ್ದು. ಇದಕ್ಕೆಲ್ಲಾ ಅವರೇ ಜವಾಬ್ದಾರರು’ ಎಂದರು.

ಈ ನಡುವೆ ಅರ್ಜನ್ ಕಪೂರ್ ಕುಟುಂಬಕ್ಕೆ ಹತ್ತಿರವಾದ ಮಲೈಕಾ, ಅವರ ಕುಟುಂಬದ ಶುಭ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಹಾಜರಾಗುತ್ತಿದ್ದರು. ಅಷ್ಟೇ ಅಲ್ಲ ಅರ್ಜುನ್ ಸಹೋದರಿಯರಾದ ಜಾನ್ವಿ ಕಪೂರ್, ಅನ್ಷುಲಾ ಕಪೂರ್, ಖುಷಿ ಕಪೂರ್ ಜತೆಗೂ ಪಾರ್ಟಿಗಳಿಗೆ ತೆರಳುತ್ತಿದ್ದಾರೆ.

ADVERTISEMENT

ಅರ್ಜುನ್ ಕಪೂರ್ ಅವರ ಹೊಸ ಚಿತ್ರ ‘ಇಂಡಿಯಾಸ್‌ ಮೋಸ್ಟ್ ವಾಟೆಂಡ್’ ಸಿನಿಮಾದ ಮೊದಲ ಪ್ರದರ್ಶನವನ್ನು ಇಬ್ಬರೂ ಜೊತೆಯಾಗಿ ವೀಕ್ಷಿಸಿರುವುದು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಬಗ್ಗೆ ಅರ್ಜುನ್ ಕಪೂರ್ ಅವರನ್ನು ಪ್ರಶ್ನಿಸಿದರೆ, ‘ಮದುವೆ, ಮದುವೆ, ನಾವಿಬ್ಬರೂ ಮದುವೆಯಾಗಲು ಬಯಸುವುದಿಲ್ಲ. ಯಾವಾಗ ಮದುವೆ ಆಗುತ್ತೇವೋ ಆಗ ಖಂಡಿತಾ ನಿಮಗಷ್ಟೇ ಅಲ್ಲ ಎಲ್ಲರಿಗೂ ತಿಳಿಸುತ್ತೇವೆ . ಎಲ್ಲರನ್ನೂ ಮದುವೆಗೆ ಆಹ್ವಾನಿಸುತ್ತೇವೆ. ನೀವು ನಮ್ಮ ಕುಟಂಬದಲ್ಲಿ ನಡೆದ ಇತರ ಮದುವೆಗಳನ್ನು ನೋಡಿಲ್ಲವೇ? ಆ ಮದುವೆಗಳೆಲ್ಲಾ ರಹಸ್ಯಮದುವೆಗಳೇ? ನಾನು ಕದ್ದುಮುಚ್ಚಿ ಮದುವೆಯಾಗುವುದನ್ನು ನಮ್ಮ ಕುಟುಂಬ ಒಪ್ಪಿಕೊಳ್ಳುತ್ತದೆಯೇ?’ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯುತ್ತಾರೆ.

‘ನಾನು ನನ್ನ ವೈಯಕ್ತಿಕ ಜೀವನದಲ್ಲಿ ಬಹಳ ಸಂತೋಷದಿಂದ ಇದ್ದೇನೆ. ವೈಯಕ್ತಿಕ ಬದುಕಾಗಲೀ, ಸಿನಿಮಾ ಬದುಕನ್ನಾಗಲೀ ನಾನು ಮುಚ್ಚಿಟ್ಟಿಲ್ಲ. ಮಾತನಾಡುವ ಕಾಲ ಬಂದಾಗ ಖಂಡಿತ ಮಾತನಾಡುತ್ತೇನೆ. ಸದ್ಯಕ್ಕಂತೂ ನಾನು ಮದುವೆಯಾಗುವ ಸ್ಥಿತಿಯಲ್ಲಿಲ್ಲ. ಜಗತ್ತು ನನ್ನ ಬಗ್ಗೆ ಏನೇ ಮಾತನಾಡಿಕೊಳ್ಳಲಿ. ನಾನು ತಲೆಕೆಡಿಸಿ ಕೊಳ್ಳುವುದಿಲ್ಲ’ ಎನ್ನುತ್ತಾರೆ 33ರ ಹರೆಯದ ಅರ್ಜುನ್.

45 ವರ್ಷದ ಮಲೈಕಾ ಅರೋರ, ‘ವಿ’ ಚಾನೆಲ್ ಮೂಲಕ ತಮ್ಮ ವೃತ್ತಿಬದುಕನ್ನು ಆರಂಭಿಸಿದವರು. ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಾಲೂರಿದ ಮೇಲೆ ಅರ್ಬಾಜ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದ ಮಲೈಕಾ, 2017ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು.

ವಿಚ್ಛೇದನದ ನಂತರ ಅರ್ಜುನ್ ಕಪೂರ್ ಜತೆಗೆ ಒಡನಾಟ ಹೊಂದಿರುವ ಮಲೈಕಾ, ಇದುವರೆಗೂ ತಮ್ಮ ಖಾಸಗಿ ಜೀವನದ ಕುರಿತು ಎಲ್ಲೂ ಮಾತನಾಡಿಲ್ಲ.

ಯೋಗ ಆ್ಯಪ್ ಮೂಲಕ ಜನಪ್ರಿಯರಾಗಿರುವ ಮಲೈಕಾ, ನಿತ್ಯವೂ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಿಮ್, ಯೋಗ, ಧ್ಯಾನ ಮತ್ತು ಈಜುತ್ತಿರುವ ಸರಣಿ ಚಿತ್ರಗಳನ್ನೇ ಕಾಣಬಹುದು.

‘ನನ್ನ ಖಾಸಗಿ ಬದುಕಿನ ನಿಮ್ಮ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರಗಳಿಲ್ಲ. ಉತ್ತರಿಸಲೂ ನಾನು ಬಯಸುವುದಿಲ್ಲ’ ಎಂಬುದಷ್ಟೇ ಮಲೈಕಾ ಅವರ ಮಾತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.