ADVERTISEMENT

‘ಲಾಂಗ್‌ಡ್ರೈವ್‌’ ಹೊರಟ ಅರ್ಜುನ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 2:41 IST
Last Updated 26 ಜನವರಿ 2023, 2:41 IST
   

ನಟ ಅರ್ಜುನ್‌ ಯೋಗಿ ನಟನೆಯ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥಾಹಂದರದ ಸಿನಿಮಾ ‘ಲಾಂಗ್‌ಡ್ರೈವ್‌’ ಫೆ.10ರಂದು ತೆರೆಕಾಣಲಿದೆ.

ಗುಡ್‌ವೀಲ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಮಂಜುನಾಥ್‌ ಗೌಡ ಬಿ.ಆರ್.(ಶಬರಿ ಮಂಜು) ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅನುಭವಗಳ ಸುತ್ತವೇ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಸಹಾಯಕ ನಿರ್ದೇಶಕರಾಗಿ ಚಂದನವನದಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀರಾಜ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ.

ಚಿತ್ರದ ಕುರಿತು ಮಾಹಿತಿ ನೀಡಿದ ಅರ್ಜುನ್‌, ‘ಪೂರ್ಣ ಪ್ರಮಾಣದ ನಾಯಕ ನಟನಾಗಿ ಇದು ನನ್ನ ಮೂರನೇ ಸಿನಿಮಾ. ಆದರೆ ಇದು ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್‌ ಸಿನಿಮಾ. ಅಪ್ಪು ಅವರ ‘ಅಣ್ಣಾಬಾಂಡ್‌’ ಸಿನಿಮಾದಲ್ಲಿ ಜ್ಯೂನಿಯರ್‌ ಆರ್ಟಿಸ್ಟ್‌ ಆಗಿದ್ದ ನನಗೆ ಚಿತ್ರರಂಗದ ಪರಿಚಯವೇ ಇರಲಿಲ್ಲ. ಅಲ್ಲಿಂದ ಪಯಣ ಇಲ್ಲಿಯವರೆಗೂ ಸಾಗಿದೆ. ಈ ಚಿತ್ರದಲ್ಲಿ ‘ಅರ್ಜುನ್‌’ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈತ ಮುಗ್ಧನಾಗಿದ್ದರೂ, ತನ್ನ ಜೀವಕ್ಕೆ ಅಪಾಯ ಬಂದಾಗ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾನೆ’ ಎಂದರು. ಈ ಚಿತ್ರದ ಮುಖಾಂತರ ಕಿರುತೆರೆ ನಟಿ ತೇಜಸ್ವಿನಿ ಶೇಖರ್‌ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.