ADVERTISEMENT

ಅರಂ–2: ನಯನತಾರಾ ಸ್ಥಾನಕ್ಕೆ ಸಮಂತಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST
ನಟಿ ನಯನತಾರಾ
ನಟಿ ನಯನತಾರಾ   

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಅರಂ’ ಚಿತ್ರದಲ್ಲಿ ನಟಿ ನಯನತಾರ ಅವರು ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸಿ ಗಮನ ಸೆಳೆದಿದ್ದರು. ಈಗ ಅರಂ –2 ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಸಮಂತಾ ಅಕ್ಕಿನೇನಿ ನಟಿಸುತ್ತಿದ್ದು, ಈ ಚಿತ್ರಕ್ಕೆನಯನತಾರ ಬದಲಾಗಿ ಸಮಂತಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂದು ಗಾಳಿಸುದ್ದಿ ಹರಡಿದೆ.

ಸದ್ಯ ಸಮಂತಾ ಅಭಿನಯದ ‘ಓ ಬೇಬಿ’ ಬಿಡುಗಡೆಯಾಗಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಸಮಂತಾ ಈಗ ಮಹಿಳಾ ಕೇಂದ್ರಿತ ಸಿನಿಮಾಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಿದ್ದು, ಈಗ ಮತ್ತೊಮ್ಮೆ ಅಂತಹದೇ ಸಿನಿಮಾ ಅವಕಾಶವನ್ನು ಬಾಚಿಕೊಂಡಿದ್ದಾರೆ.

ಕಳೆದ ವರ್ಷದ ಹಿಟ್‌ ಚಿತ್ರಗಳಲ್ಲಿ ‘ಅರಂ’ ಕೂಡ ಒಂದಾಗಿತ್ತು. ನಯನತಾರಗೆ ಈ ಚಿತ್ರ ಹೊಸ ಇಮೇಜ್‌ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಜವಾಬ್ದಾರಿಯುತ ಐಎಎಸ್‌ ಅಧಿಕಾರಿಯಾಗಿ ಅವರು ನಟಿಸಿದ್ದರು. ಪಾಳು ಬಿದ್ದ ಮುಚ್ಚದೇ ಇದ್ದಬೋರ್‌ವೆಲ್‌ ಗುಂಡಿಯೊಳಗೆ 4 ವರ್ಷದ ಮಗು ಬೀಳುತ್ತದೆ. ರಕ್ಷಣಾ ಕಾರ್ಯಾಚರಣೆ ಮಾಡುತ್ತಾವ್ಯವಸ್ಥೆಯ ಲೋಪದೋಷಗಳು ಹಾಗೂ ಸರ್ಕಾರಕ್ಕೆ ಬಡವರ ಬಗೆಗಿನ ಅಸಡ್ಡೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಈಗ
ಅರಂ –2 ಇನ್ನಷ್ಟು ಪವರ್‌ಫುಲ್‌ ಇರಲಿದೆ. ಆದರೆ ಈ ಚಿತ್ರ ಮುಂದುವರಿದ ಭಾಗವೇ ಅಥವಾ ಬೇರೆಯದೇ ಕತೆಯನ್ನು ಒಳಗೊಂಡಿರಲಿದೆಯೇ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ADVERTISEMENT

ಅರಂ ಚಿತ್ರವನ್ನು ನಿರ್ದೇಶನ ಮಾಡಿದ್ದ ಗೋಪಿ ನಾಯನಾರ್‌ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ಗೋಪಿ ಅವರು ಸಮಂತಾ ಅವರಿಗೆ ಚಿತ್ರಕತೆ ಬಗ್ಗೆ ವಿವರಿಸಿದ್ದು, ಕತೆ ಕೇಳಿ ಇಷ್ಟಪಟ್ಟಿರುವ ಸಮಂತಾ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿವೆ.

ಸಮಂತಾ ಸದ್ಯ ತಮಿಳಿನ ಹಿಟ್‌ ಸಿನಿಮಾ 96 ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಗೋಪಿ ನಾಯನಾರ್‌ ಅವರು ಎರಡನೇ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಜೈ ನಾಯಕನಾಗಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.