ADVERTISEMENT

ಆಶಿಕಾ as ಇಶಿಕಾ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 17:29 IST
Last Updated 3 ಫೆಬ್ರುವರಿ 2023, 17:29 IST
ಆಶಿಕಾ ರಂಗನಾಥ್‌
ಆಶಿಕಾ ರಂಗನಾಥ್‌   

ಸ್ಯಾಂಡಲ್‌ವುಡ್‌ನ ‘ಪಟಾಕಿ ಪೋರಿ’ ಟಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಆಶಿಕಾ ರಂಗನಾಥ್‌ ಅವರ ಚೊಚ್ಚಲ ತೆಲುಗು ಸಿನಿಮಾ ‘ಅಮಿಗೋಸ್‌’ ಫೆ.10ರಂದು ಬಿಡುಗಡೆ ಆಗುತ್ತಿದೆ. ಸದ್ಯ ಇದೇ ಸಿನಿಮಾ ಪ್ರಚಾರದಲ್ಲಿ ಆಶಿಕಾ ತೊಡಗಿಸಿ
ಕೊಂಡಿದ್ದಾರೆ.

ರಾಜೇಂದ್ರ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ನಂದಮೂರಿ ಕಲ್ಯಾಣ್‌ ರಾಮ್‌ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ಆಶಿಕಾ. ಈ ಸಿನಿಮಾದಲ್ಲಿ ‘ಇಶಿಕಾ’ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ‘ಎನ್ನೋ ರಾತ್ರುಲೊಸ್ತಾಯಿ’ ಹಾಡು ಹಿಟ್‌ ಆಗಿದೆ. ಹಾಡಿನಲ್ಲಿ ಆಶಿಕಾ ಗ್ಲ್ಯಾಮರ್‌ಗೆ ನೋಡುಗರು ಫಿದಾ ಆಗಿದ್ದಾರೆ. ಸ್ಯಾಂಡಲ್‌ವುಡ್‌, ಕಾಲಿವುಡ್‌ ಬಳಿಕ ಇದೀಗ ಟಾಲಿವುಡ್‌ನಲ್ಲೂ ‘ಚುಟು ಚುಟು’ ಬೆಡಗಿ ಮಿಂಚಲಿದ್ದಾರೆ.

ಸದ್ಯ ‘ಸಿಂಪಲ್‌’ ಸುನಿ ನಿರ್ದೇಶನದ ‘ಗತವೈಭವ’ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಆಶಿಕಾ, ತಮಿಳಿನಲ್ಲಿ ನಟ ಸಿದ್ಧಾರ್ಥ್‌ ಅವರ ಜೊತೆಗೂ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಮತ್ತೊಂದು ತಮಿಳು ಸಿನಿಮಾಗೂ ಕಾಲ್‌ಶೀಟ್‌ ನೀಡಿದ್ದಾರೆ. ಆಶಿಕಾ ಲೀಡ್‌ನಲ್ಲಿ ನಟಿಸಿರುವ ಕನ್ನಡದ ‘O2’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ⇒v

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.