ADVERTISEMENT

ಅವತಾರ್ ದಿ ವೇ ಆಫ್ ವಾಟರ್ ಸಿನಿಮಾದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2022, 15:58 IST
Last Updated 2 ನವೆಂಬರ್ 2022, 15:58 IST
   

ಬೆಂಗಳೂರು: 2009ರಲ್ಲಿ ಬಿಡುಗಡೆಯಾಗಿ ಜಾಗತಿಕ ದಾಖಲೆಗಳನ್ನು ದೂಳಿಪಟ ಮಾಡಿದ್ದ ಜೇಮ್ಸ್ ಕೆಮರೂನ್ ನಿರ್ದೇಶನದ 'ಅವತಾರ್' ಸರಣಿಯ 'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ.

ಟ್ರೇಲರ್‌ಗೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಹಿಂದಿನ ಅವತಾರ್ ಸಿನಿಮಾದಲ್ಲಿನ ನಾಯಕ ನಾಯಕಿಗೆ ಈ ಸಿನಿಮಾದಲ್ಲಿಮಕ್ಕಳಾಗಿದ್ದು ಹೊಸದೊಂದು ಲೋಕವನ್ನು ಜೇಮ್ಸ್ ಕೆಮರೂನ್ ಅನಾವರಣ ಮಾಡಲಿದ್ದಾರೆ.

ಮುಂದುವರೆದ ಸರಣಿಯಾಗಿರುವ 'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ ಡಿಸೆಂಬರ್ 16 ರಂದು ಬಿಡುಗಡೆಯಾಗುತ್ತಿದೆ.

ADVERTISEMENT

ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್ ಸೇರಿದಂತೆ ಮುಖ್ಯ ತಾರಾಗಣದಲ್ಲಿದ್ದಾರೆ.

ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಅವತಾರ್ ಜಾಗತಿಕ ಮಾರುಕಟ್ಟೆಯಲ್ಲಿ 8 ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸಿತ್ತು ಎಂದು ವರದಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.