ADVERTISEMENT

ಬಿಕಿನಿ ಲುಕ್‌ನಲ್ಲಿ ಶ್ರದ್ಧಾ ಕಪೂರ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 11:11 IST
Last Updated 10 ಮಾರ್ಚ್ 2020, 11:11 IST
   

ನಿರ್ದೇಶಕ ಅಹಮ್ಮದ್‌ ಖಾನ್‌ ಮತ್ತು ನಟ ಟೈಗರ್‌ ಶ್ರಾಫ್ ಕಾಂಬಿನೇಷನ್‌ನಡಿ ತೆರೆ ಕಂಡಿರುವ ಹಿಂದಿಯ ‘ಬಾಗಿ 3’ ಚಿತ್ರ ‘ಕೋವಿಡ್‌ 19’ ಭೀತಿಯ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್‌ ಕಂಡಿದೆ. ‘ಸಾಹೋ’ ಬೆಡಗಿ ಶ್ರದ್ಧಾ ಕಪೂರ್‌ ಅವರು ನಟ ಟೈಗರ್‌ ಶ್ರಾಫ್‌ ಜೊತೆಗೆ ಭರ್ಜರಿಯಾಗಿಯೇ ಹೆಜ್ಜೆ ಹಾಕಿದ್ದಾರೆ. ಹಾಡೊಂದರಲ್ಲಿ ಶ್ರದ್ಧಾ ಬಿಕಿನಿ ತೊಟ್ಟು ಕುಣಿದಿರುವುದು ಪಡ್ಡೆಹುಡುಗರ ನಿದ್ದೆಗೆಡಿಸಿದೆ.

‘ಸಾಹೋ’ ಚಿತ್ರದಲ್ಲಿನ ಪ್ರಭಾಸ್‌ ಜೊತೆಗಿನ ಶ್ರದ್ಧಾ ನಟನೆ ಪ್ರೇಕ್ಷಕರ ಮನ ಸೆಳೆದಿತ್ತು. ಬಳಿಕ ಆ್ಯಕ್ಷನ್‌ ಚಿತ್ರ ‘ಬಾಗಿ 3’ಯಲ್ಲಿಯೂ ಆಕೆಯ ನಟನೆ ಕುರಿತು ಒಳ್ಳೆಯ ಮಾತುಗಳೂ ಕೇಳಿಬರುತ್ತಿವೆ. ಮತ್ತೊಂದೆಡೆ ವೃತ್ತಿಬದುಕು ಸೇರಿದಂತೆ ಮಹತ್ವದ ವಿಷಯಗಳನ್ನು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದರಲ್ಲಿ ಹಿಂಜರಿಕೆಪಡುವುದಿಲ್ಲ. ಈ ನಡುವೆಯೇ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಬಾಗಿ 3’ ಚಿತ್ರದಲ್ಲಿನ ಬಿಕಿನಿ ಫೋಟೊವೊಂದರನ್ನು ಹಂಚಿಕೊಂಡಿರುವುದು ಈಗ ಸುದ್ದಿಯಾಗಿದೆ.

ನಟಿ ದಿಶಾ ಪಟಾನಿ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದಿಶಾ ಮತ್ತು ಶ್ರದ್ಧಾ ಇಬ್ಬರೂ ಬಿಕಿನಿ ತೊಟ್ಟು ಹಾಡುಗಳಿಗೆಸೊಂಟ ಬಳುಕಿಸಿದ್ದಾರೆ. ಅದ್ಭುತ ಸಾಹಸ ದೃಶ್ಯಗಳು, ಶ್ರದ್ಧಾಳ ಬಿಕಿನಿ ಲುಕ್‌, ದಿಶಾ ಪಟಾನಿಯ ಕುಣಿತ... ಎಲ್ಲವೂ ಮೊದಲ ವಾರದ ಮೂರು ದಿನಗಳಲ್ಲಿ ಈ ಚಿತ್ರ ₹ 53 ಕೋಟಿ ಲಾಭ ಗಳಿಸಲು ಕಾರಣವಾಗಿದೆ ಎಂಬುದು ಬಾಲಿವುಡ್‌ ಅಂಗಳದಿಂದ ಕೇಳಿಬರುತ್ತಿರುವ ಮಾತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.