ADVERTISEMENT

'ಬಚ್ಚನ್‌ ಪಾಂಡೆ' ಟ್ರೈಲರ್‌ ಬಿಡುಗಡೆ: ದರೋಡೆಕೋರನ ಪಾತ್ರದಲ್ಲಿ ಮಿಂಚಿದ ಅಕ್ಷಯ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2022, 6:53 IST
Last Updated 18 ಫೆಬ್ರುವರಿ 2022, 6:53 IST
ಅಕ್ಷಯ್‌ ಕುಮಾರ್
ಅಕ್ಷಯ್‌ ಕುಮಾರ್   

ಮುಂಬೈ: ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ 'ಬಚ್ಚನ್ ಪಾಂಡೆ' ಸಿನಿಮಾದ ಟ್ರೈಲರ್‌ ಶುಕ್ರವಾರ ಬಿಡುಗಡೆಯಾಗಿದೆ.

ಮೂರು ನಿಮಿಷಗಳ ಟ್ರೈಲರ್‌ನಲ್ಲಿ ಅಕ್ಷಯ್‌ ಕುಮಾರ್ ಅವರು ದರೋಡೆಕೋರನ ಪಾತ್ರದಲ್ಲಿ ಮಿಂಚಿದ್ದಾರೆ. ಕೃತಿ ಸನೋನ್‌, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್, ಸಂಜಯ್ ಮಿಶ್ರಾ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅರ್ಷದ್ ವಾರ್ಸಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆ್ಯಕ್ಷನ್ ಕಾಮಿಡಿ ಕಥೆ ಹೊಂದಿರುವ ಈ ಚಿತ್ರಕ್ಕೆ ಸಾಜಿದ್ ನಾಡಿಯಾವಾಲ ಹೂಡಿಕೆ ಮಾಡಿದ್ದಾರೆ. 'ಹೌಸ್‌ಫುಲ್ 4' ಖ್ಯಾತಿಯ ಫರ್ಹಾದ್ ಸಾಮ್ಜಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ADVERTISEMENT

ಈ ಚಿತ್ರದಲ್ಲಿ ಕೃತಿ ಸನೋನ್ ನಾಯಕಿಯಾಗಿ ನಟಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಅರ್ಷದ್ ವಾರ್ಸಿ ಹಾಗೂ ಪಂಕಜ್ ತ್ರಿಪಾಠಿ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರವು ಮಾರ್ಚ್ 18 ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.