ADVERTISEMENT

ಭಾರತಕ್ಕೆ ‘ಬ್ಯಾಡ್‌ ಬಾಯ್ಸ್‌’

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:45 IST
Last Updated 28 ಜನವರಿ 2020, 19:45 IST
‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’ ಚಿತ್ರದಲ್ಲಿ ವಿಲ್‌ ಸ್ಮಿತ್‌ ಮತ್ತು ಮಾರ್ಟಿನ್‌ ಲಾರೆನ್ಸ್‌ 
‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’ ಚಿತ್ರದಲ್ಲಿ ವಿಲ್‌ ಸ್ಮಿತ್‌ ಮತ್ತು ಮಾರ್ಟಿನ್‌ ಲಾರೆನ್ಸ್‌    

ಕೊಲಂಬಿಯಾ ಪಿಕ್ಚರ್ಸ್‌ ನಿರ್ಮಾಣದ ‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’ ಜ.31ರಂದು ಭಾರತದಲ್ಲಿ ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಕಾಮೆಡಿ ಹಾಗೂ ಆ್ಯಕ್ಷನ್ ಮಿಶ್ರಿತ ಸಿನಿಮಾದಲ್ಲಿ ವಿಲ್ ಸ್ಮಿತ್ ಹಾಗೂ ಮಾರ್ಟಿನ್ ಲಾರೆನ್ಸ್ ಪೊಲೀಸ್‌ ಅಧಿಕಾರಿಗಳಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.ಈ ಹಿಂದೆ ಬಂದ ಬ್ಯಾಡ್‌ ಬಾಯ್ಸ್‌ (1995), ಬ್ಯಾಡ್‌ ಬಾಯ್ಸ್‌–2 (2003) ಮುಂದುವರಿದ ಭಾಗವೇ ‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’.

ಆದಿಲ್ ಎಲ್ ಅರ್ಬಿ ಮತ್ತು ಬಿಲಾಲ್ ಫಲ್ಲಾಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಜೆರ್ರಿ ಬ್ರೂಕ್‌ಹೈಮರ್, ವಿಲ್ ಸ್ಮಿತ್ ಮತ್ತು ಡೌಗ್ ಬೆಲ್‌ಗ್ರಾಡ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ADVERTISEMENT

ಅಮೆರಿಕದಲ್ಲಿ ಜ.17ರಂದು ಬಿಡುಗಡೆಯಾದ ‘ಬ್ಯಾಡ್‌ ಬಾಯ್ಸ್‌ ಫಾರ್‌ ಲೈಫ್‌’ಎರಡು ವಾರಗಳಲ್ಲಿ ಚಿತ್ರ ಸಾವಿರಾರು ಕೋಟಿ ಗಳಿಸಿದೆ. ಹೊಸ ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್‌ ಸಿನಿಮಾ ಎಂಬ ಹೆಗ್ಗಳಿಕೆಗೂಪಾತ್ರವಾಗಿದೆ.

ಸುಮಾರು 17 ವರ್ಷಗಳ ನಂತರ ಮತ್ತೆ ತೆರೆಗೆ ಬಂದ ‘ಬ್ಯಾಡ್‌ ಬಾಯ್ಸ್‌’ ಸರಣಿ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲಿ ಇನ್ನೂಕ್ರೇಜ್‌ ಕಡಿಮೆಯಾಗಿಲ್ಲ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ.

ಅವತಾರ್, ಅಮೆರಿಕನ್ ಸ್ಪಿನ್ನರ್, ಕುಂಗ್‌ಫೂ ಪಾಂಡ–3 ಸಿನಿಮಾ ಕೂಡ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಸಿದ ಇತಿಹಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.