ADVERTISEMENT

ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಅಕ್ಟೋಬರ್‌ 31ಕ್ಕೆ ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2024, 11:08 IST
Last Updated 12 ಸೆಪ್ಟೆಂಬರ್ 2024, 11:08 IST
<div class="paragraphs"><p>ಬಘೀರ ಪೋಸ್ಟರ್</p></div>

ಬಘೀರ ಪೋಸ್ಟರ್

   

ಶ್ರೀಮುರಳಿ ನಟನೆಯ ಬಹು ನಿರೀಕ್ಷಿತ ಚಿತ್ರ ‘ಬಘೀರ’ ಅ.31ಕ್ಕೆ ತೆರೆಗೆ ಬರಲಿದೆ. ಪ್ರಶಾಂತ್‌ ನೀಲ್‌ ಕಥೆ ಬರೆದು, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಚಿತ್ರಕ್ಕೆ ಸೂರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಚಿತ್ರ ಸೆಟ್ಟೇರಿ ವರ್ಷಗಳೇ ಕಳೆದಿದ್ದವು. ಶೂಟಿಂಗ್‌ ವೇಳೆ ಶ್ರೀಮುರಳಿಗೆ ಗಾಯ ಮತ್ತಿತರ ಕಾರಣಗಳಿಂದ ಚಿತ್ರ ವಿಳಂಬವಾಗಿತ್ತು.

ಇದೀಗ ಹೊಂಬಾಳೆ ಫಿಲ್ಮ್ಸ್‌ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಚಿತ್ರ ತೆರೆಗೆ ಬರಲಿದೆ.

‘ಉಗ್ರಂ’ ಬಳಿಕ ಶ್ರೀಮುರಳಿ, ಪ್ರಶಾಂತ್‌ ನೀಲ್‌ ಕೈಜೋಡಿಸಿರುವ ಚಿತ್ರವಿದು.

ಕಳೆದ ವರ್ಷ ಬಿಡುಗಡೆಗೊಂಡ ಚಿತ್ರದ ಟೀಸರ್‌ನಲ್ಲಿ ‘ಉಗ್ರಂ’, ‘ಕೆಜಿಎಫ್‌’ನ ಛಾಯೆ ದಟ್ಟವಾಗಿತ್ತು. ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್‌, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್  ಮುಂತಾದವರಿದ್ದಾರೆ. 

ಅಜನೀಶ್‌ ಲೋಕನಾಥ್‌ ಸಂಗೀತ, ಎ.ಜೆ.ಶೆಟ್ಟಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.