ADVERTISEMENT

ಡಿಸ್ಕೊ ಕಿಂಗ್ ಬಪ್ಪಿ ಲಹಿರಿಗೆ ಬಾಲಿವುಡ್‌ ತಾರೆಯರ ಅಂತಿಮ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 8:59 IST
Last Updated 16 ಫೆಬ್ರುವರಿ 2022, 8:59 IST
ಬಪ್ಪಿ ನಿವಾಸಕ್ಕೆ ಭೇಟಿ ನೀಡಿದ ನಟಿ ಕಾಜೋಲ್‌
ಬಪ್ಪಿ ನಿವಾಸಕ್ಕೆ ಭೇಟಿ ನೀಡಿದ ನಟಿ ಕಾಜೋಲ್‌   

ಮುಂಬೈ: ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ(69) ಅವರು ಮುಂಬೈನಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

‘ಡಿಸ್ಕೊ ಕಿಂಗ್’ ಬಪ್ಪಿ ಲಹಿರಿ ನಿವಾಸಕ್ಕೆ ಬುಧವಾರ ಬೆಳಿಗ್ಗೆ ಬಾಲಿವುಡ್‌ನ ಹಲವು ತಾರೆಯರು ಭೇಟಿ ನೀಡಿ ಶ್ರದ್ದಾಂಜಲಿ ಸಲ್ಲಿಸಿದರು.

ನಟಿ ಕಾಜೋಲ್, ಅವರ ತಾಯಿ ಹಾಗೂ ಹಿರಿಯ ನಟಿ ತನುಜಾ ಅವರು ಬಪ್ಪಿ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ADVERTISEMENT

ಗಾಯಕರಾದ ಶಾನ್, ಅಲ್ಕಾ ಯಾಗ್ನಿಕ್, ಸಂಗೀತ ಸಂಯೋಜಕ ಲಲಿತ್ ಪಂಡಿತ್, ನಿರ್ದೇಶಕ ರಾಕೇಶ್ ರೋಷನ್ ಬಪ್ಪಿ ಅವರ ಅಂತಿಮ ದರ್ಶನ ಪಡೆದರು.

ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.