ADVERTISEMENT

ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ‘ತಾಯಿ ಕಸ್ತೂರ ಗಾಂಧಿ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 6:23 IST
Last Updated 8 ಏಪ್ರಿಲ್ 2021, 6:23 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ    

ಕಸ್ತೂರಬಾ ಅವರ ಬದುಕನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ. ‘ತಾಯಿ ಕಸ್ತೂರ ಗಾಂಧಿ’ ಚಿತ್ರದ ಹೆಸರು. ಗಾಂಧೀಜಿಯವರಷ್ಟೇ ಕಸ್ತೂರಬಾ ಅವರು ಕೂಡಾ ಭಾರತದ ಬದುಕಿನ ಮೇಲೆ ಪರಿಣಾಮ ಬೀರಿದ್ದಾರೆ. ಕಸ್ತೂರ ಬಾ ಅವರ ಜತೆ ಗಾಂಧೀಜಿ ಅವರ ಬದುಕನ್ನೂ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ಪ್ರೊ.ಬರಗೂರು ತಿಳಿಸಿದ್ದಾರೆ.

ಬರಗೂರು ಅವರೇ ಬರೆದ ‘ಕಸ್ತೂರ V/s ಗಾಂಧಿ’ ಕಾದಂಬರಿಯನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಈ ಕಾದಂಬರಿಯು ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಈ ಚಿತ್ರದ ಚಿತ್ರಕಥೆ, ಸಂಭಾಷಣೆಯೂ ಬರಗೂರು ಅವರದ್ದೇ.

ಜನಮಿತ್ರ ಮೂವೀಸ್‌ ಬ್ಯಾನರ್‌ ಅಡಿ ಗೀತಾ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.

ADVERTISEMENT

ಕಸ್ತೂರಬಾ ಪಾತ್ರದಲ್ಲಿ ಹರಿಪ್ರಿಯಾ, ಗಾಂಧೀಜಿ ಪಾತ್ರದಲ್ಲಿ ನಟ ಕಿಶೋರ್‌ ಕಾಣಿಸಿಕೊಳ್ಳಲಿದ್ದಾರೆ. ಡಾ.ಅಂಬೇಡ್ಕರ್‌ ಪಾತ್ರದಲ್ಲಿ ಹಿರಿಯ ಕಲಾವಿದರೊಬ್ಬರು ಅಭಿನಯಿಸಲಿದ್ದಾರೆ. ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆದಿದೆ. ಚಿತ್ರಕ್ಕೆ ನಾಗರಾಜ್‌ ಅದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್‌ ಸಂಗೀತ, ಸುರೇಶ್‌ ಅರಸು ಅವರ ಸಂಕಲನ, ಮೈತ್ರಿ ಬರಗೂರು ಅವರ ಕಲಾ ನಿರ್ದೇಶನ ಇದೆ.

ಗುಜರಾತ್‌ನ ಸಾಬರಮತಿ ಆಶ್ರಮ, ಮಹಾರಾಷ್ಟ್ರದ ವಾರ್ಧಾ ಆಶ್ರಮ, ಪುಣೆಯ ಆಗಾಖಾನ್‌ ಬಂಗಲೆಯಲ್ಲಿ ಚಿತ್ರೀಕರಣ ನಡೆಯಲಿದೆ. ಕೋವಿಡ್‌ ಹಾವಳಿ ಕಡಿಮೆಯಾದ ಕೂಡಲೇ ಚಿತ್ರ ಸೆಟ್ಟೇರಲಿದೆ ಎಂದು ಪ್ರೊ.ಬರಗೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.