
ವಿವಾಹೇತರ ಸಂಬಂಧಗಳ ಕುರಿತು ಭಾವನಾತ್ಮಕ ಕಥೆಯನ್ನು ಹೊಂದಿರುವ ‘ಬಯಕೆಗಳು ಬೇರೂರಿದಾಗ’ ಚಿತ್ರ ಫೆಬ್ರುವರಿ 6ರಂದು ತೆರೆ ಕಾಣಲಿದೆ. ಆಕರ್ಷ್ ಆದಿತ್ಯ ಅವರ ಕಾದಂಬರಿ ಆಧಾರಿತ ಚಿತ್ರಕ್ಕೆ ಎನ್.ಜ್ಯೋತಿಲಕ್ಷ್ಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ಚಿತ್ರ ಈಗಾಗಲೇ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದೆ.
‘ಮದುವೆ ಸ್ವರ್ಗದಲ್ಲಿ ನಿಶ್ಚಯ’ ಎನ್ನುವ ನಂಬಿಕೆ ಇದೆ. ಆದರೆ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ 1.7 ಲಕ್ಷ ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ವಿವಾಹೇತರ ಸಂಬಂಧ ಕೂಡ ಇದಕ್ಕೆ ಮುಖ್ಯ ಕಾರಣ. ಸಂಸ್ಕಾರ, ಸಾಮಾಜಿಕ ಒತ್ತಡಗಳ ನಡುವೆ ಸಂವಾದ, ತಾಳ್ಮೆ, ಹೊಂದಾಣಿಕೆಯ ಮೌಲ್ಯಗಳು ಹಿಂದೆ ಸರಿಯುತ್ತಿವೆ. ಈ ಎಲ್ಲ ಅಂಶಗಳನ್ನು ಹೊಂದಿರುವ ಚಿತ್ರ’ ಎನ್ನುತ್ತಾರೆ ನಿರ್ದೇಶಕಿ.
ಚಿತ್ರಕ್ಕೆ ಎನ್.ಸುದರ್ಶನ್ ಬಂಡವಾಳ ಹೂಡಿದ್ದಾರೆ. ಅರೋನ್ ಕಾರ್ತೀಕ್ ಸಂಗೀತ, ಜೈ ಮಾರುತಿ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.