ಪ್ರಿಯಾ ಶಠಮರ್ಷಣ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ‘ಬೀಟ್ ಪೊಲೀಸ್’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಎಂ.ಆರ್.ಕಪಿಲ್ ಅವರ ನಿರ್ದೇಶನದ ಚಿತ್ರವಿದು. ನೆಲಮಂಗಲ ಪೊಲೀಸ್ ಠಾಣೆಯ ಬಳಿಯಲ್ಲಿಯೇ ಚಿತ್ರ ಮುಹೂರ್ತ ಸಮಾರಂಭ ನಡೆದಿದ್ದು ವಿಶೇಷವಾಗಿತ್ತು.
ಆರ್ಯ ಫಿಲ್ಮ್ಸ್ ಲಾಂಛನದಲ್ಲಿ ಆರ್.ಲಕ್ಷ್ಮಿ ನಾರಾಯಣ ಗೌಡ ಬಂಡವಾಳ ಹೂಡುತ್ತಿದ್ದಾರೆ. ‘ನಮ್ಮ ನಿರ್ಮಾಣ ಸಂಸ್ಥೆಯ ನಾಲ್ಕನೆ ಚಿತ್ರವಿದು. ನೈಜ ಘಟನೆಯ ಸುತ್ತ ನಡೆವ ಕಥಾಹಂದರ ಚಿತ್ರದಲ್ಲಿದ್ದು, ಕೌರವ ವೆಂಕಟೇಶ್ ಚಿತ್ರದ ನಾಯಕ. ಡ್ರ‍್ಯಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ. ನಾಲ್ಕು ಹಾಡು, ನಾಲ್ಕು ಸಾಹಸ ದೃಶ್ಯಗಳಿವೆ. ಈಗಿನ ಕಾಲದ ಶಿಕ್ಷಣ ಕುರಿತು ಒಂದು ಗಟ್ಟಿ ಕಥೆಯನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದ್ದು, ಜನರಿಗೆ ಎಚ್ಚರಿಕೆ ಕೊಡುವ ಪ್ರಯತ್ನ ಮಾಡಿದ್ದೇವೆ’ ಎಂದರು ನಿರ್ಮಾಪಕರು.
ಎಂ.ಆರ್.ಕಪಿಲ್ ನೃತ್ಯ ಸಂಯೋಜಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೇಗೆ ವಂಚನೆಯಾಗುತ್ತಿದೆ? ಅದರ ಪರಿಣಾಮಗಳೇನು? ಎಂಬುದು ನಮ್ಮ ಚಿತ್ರದ ಕಥಾವಸ್ತು. ಬೆಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದರು ನಿರ್ದೇಶಕ.
ಮುಂಜಾನೆ ಮಂಜು ಛಾಯಾಚಿತ್ರಗ್ರಹಣ, ರಾಜೇಶ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.