ಚಿತ್ರದ ಪೋಸ್ಟರ್
ನಟ ಭುವನ್ ಪೊನ್ನಣ್ಣ ಆರು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ‘ಹಲೋ 123’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಶೀರ್ಷಿಕೆ ಘೋಷಣೆಗೊಂಡಿದೆ.
ಮ್ಯೂಸಿಕಲ್ ಲವ್ ಸ್ಟೋರಿ ಹೊಂದಿರುವ ಕಥೆಗೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ವಿಜಯ್ ಟಾಟಾ ಬಂಡವಾಳ ಹೂಡುತ್ತಿದ್ದಾರೆ. ‘ರಾಂಧವ’ ಚಿತ್ರದ ಬಳಿಕ ಸಣ್ಣ ವಿರಾಮ ತೆಗೆದುಕೊಂಡೆ. ಈ ಸಮಯದಲ್ಲಿ ನನ್ನ ಉದ್ಯಮವನ್ನು ಬಲಪಡಿಸಿದೆ. ಮದುವೆಯೂ ಆಗಿ, ಮಗು ಆಯಿತು. ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು ಅಂತ ಯೋಚಿಸಿ ಹಲವು ಸಿನಿಮಾಗಳನ್ನು ಕೈಬಿಟ್ಟೆ. ಈಗ ಮಗಳು ಸ್ವಲ್ಪ ದೊಡ್ಡವಳಾಗಿದ್ದಾಳೆ. ಕುಟುಂಬವನ್ನು ಪತ್ನಿ ಹರ್ಷಿಕಾ ನಿಭಾಯಿಸುತ್ತಿದ್ದಾಳೆ. ಹೀಗಾಗಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದೇನೆ’ ಎಂದರು ಭುವನ್.
ಚಿತ್ರತಂಡ
‘ಪ್ರೇಮಕಥೆಯೊಂದಿಗೆ ಸಾಕಷ್ಟು ಮನರಂಜನೀಯ ಅಂಶಗಳೂ ಸಿನಿಮಾದಲ್ಲಿರಲಿವೆ. ಯೋಗರಾಜ್ ಭಟ್–ವಿ.ಹರಿಕೃಷ್ಣ ಜೋಡಿಯ ಹಾಡುಗಳು ಚಿತ್ರದ ಮತ್ತೊಂದು ಆಕರ್ಷಣೆ. ಮಲೆನಾಡ ಹಸಿರು ಹೊದಿಕೆ, ಕಾಡುವ ಪಾತ್ರಗಳು, ಭಾವುಕ ಕ್ಷಣಗಳು ಈ ಕಥೆಯಲ್ಲಿವೆ. ಇಂದಿನ ಜೆನ್-ಜೀಗಳಿಗೆ ಇಷ್ಟವಾಗುವ ಕಥೆ. ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ’ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.