ADVERTISEMENT

‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಆರಂಭ: ಫಸ್ಟ್‌ ಲುಕ್‌ ಹಂಚಿಕೊಂಡ ನಟ ಸುದೀಪ್‌ 

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:37 IST
Last Updated 16 ಏಪ್ರಿಲ್ 2025, 13:37 IST
<div class="paragraphs"><p>ಸುದೀಪ್‌ ಹಂಚಿಕೊಂಡ ಸಿನಿಮಾದ ಫಸ್ಟ್‌ ಲುಕ್‌</p></div>

ಸುದೀಪ್‌ ಹಂಚಿಕೊಂಡ ಸಿನಿಮಾದ ಫಸ್ಟ್‌ ಲುಕ್‌

   

ಬೆಂಗಳೂರು: ಅನೂಪ್‌ ಭಂಡಾರಿ ನಿರ್ದೇಶನದ ಸುದೀಪ್‌ ನಟನೆಯ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ.

ಈ ಕುರಿತು ಸುದೀಪ್‌ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ADVERTISEMENT

ವಿಕ್ರಾಂತ್‌ ರೋಣದಲ್ಲಿ ಸುದೀಪ್‌ ಮತ್ತು ಅನೂಪ್‌ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಬಿಲ್ಲ ರಂಗ ಬಾಷಾ ಮೂಲಕ ಮತ್ತೆ ಜತೆಯಾಗಿದ್ದಾರೆ. ಈ ಚಿತ್ರವನ್ನು ನಿರಂಜನ್‌ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಮುಖ್ಯವಾದ ಆ್ಯಕ್ಷನ್‌ ದೃಶ್ಯಗಳ ಮೂಲಕ ಬಿಲ್ಲ ರಂಗ ಬಾಷಾ ಚಿತ್ರೀಕರಣ ಆರಂಭಿಸಲಾಗಿದೆ. 20 ದಿನಗಳ ಕಾಲ ಮೊದಲ ಅವಧಿಯ ಶೂಟಿಂಗ್‌ ನಡೆಯಲಿದೆ. ನಿರ್ಮಾಣ ತಂಡ ಹಲವು ರೀತಿಯ ಸೆಟ್‌ಗಳನ್ನು ಹಾಕುತ್ತಿದೆ ಎಂದು ನಿರ್ದೇಶಕ ಅನೂಪ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರದ ಮೊದಲ ಲುಕ್‌ ಕೂಡ ಬಿಡುಗಡೆಯಾಗಿದೆ. ಇದನ್ನು ಸುದೀಪ್‌ ಹಂಚಿಕೊಂಡಿದ್ದಾರೆ.

ಸಿನಿಮಾದ ಕಥೆಯು ಕ್ರಿ.ಶ. 2209ರ ಅವಧಿಯಲ್ಲಿ ಸಾಗುತ್ತದೆ ಎಂದು ಹೇಳಲಾಗಿದ್ದು, ತಾಜ್ ಮಹಲ್ ಮತ್ತು ಸ್ಟಾಚ್ಯೂ ಆಫ್ ಲಿಬರ್ಟಿಯಂತಹ ಶಿಥಿಲ ಸ್ಮಾರಕಗಳಲ್ಲಿ ಶೂಟಿಂಗ್‌ ನಡೆಯಲಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.