ADVERTISEMENT

ಸೀರೆಯಲ್ಲಿರುವ ಬಿಪಾಶ ಫೋಟೊ ವೈರಲ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 9:03 IST
Last Updated 24 ಜುಲೈ 2020, 9:03 IST
ಬಿಪಾಶಾ ಬಸು
ಬಿಪಾಶಾ ಬಸು   

ಬಾಲಿವುಡ್‌ನ ಕೃಷ್ಣಸುಂದರಿ ಬಿಪಾಶ ಬಸು, ಸಿನಿಮಾ ಮತ್ತು ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚಿದವರು.

ಹಿಂದಿ ಸಿನಿಮಾದಲ್ಲಿ ಪ್ರಮುಖವಾಗಿ ನಟಿಸಿದರೂ, ನಂತರ ತೆಲುಗು, ತಮಿಳು, ಬಂಗಾಳಿಮತ್ತು ಇಂಗ್ಲಿಷ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಮಾನ್ಯವಾಗಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳವ ಈ ನಟಿ, ಪಡ್ಡೆ ಹುಡುಗರ ನಿದ್ದೆಗೆಡಿಸಿದವರೂ ಹೌದು. 2001ರಲ್ಲಿ ತೆರೆಕಂಡ ‘ಅಜನಬಿ’ ಇವರ ಮೊದಲ ಚಿತ್ರ. 2002ರಲ್ಲಿ ’ರಾಝ್‌’ ಸೀಕ್ವೆಲ್‌ ಸಿನಿಮಾ ಬಂತು. ಅದು ಫಿಲಂಫೇರ್‌ ಅವಾರ್ಡ್‌ಗೂ ನಾಮನಿರ್ದೇಶನವಾಯಿತು.

'ಧೂಮ್‌–2’ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಿಪಾಶ, ಈಗ ಫ್ಯಾಷನ್‌ ಡಿಸೈನರ್‌ ಸಂಜುಕ್ತಾ ದತ್ತಾ ಅವರ ವಿನ್ಯಾಸಗೊಳಿಸಿರುವ ಸೀರೆಯುಟ್ಟ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಮಾವಿನಹಣ್ಣು ಬಣ್ಣದ ಸೀರೆ ತೊಟ್ಟಿರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಬಿಪಾಶಾ. ಇನ್ನೊಂದು ಫೋಟೊದಲ್ಲಿ ಕಪ್ಪು ಮತ್ತು ಬಂಗಾರ ಬಣ್ಣದ ಅಸ್ಸಾಮೀ ಮೆಖ್ಲಾ ಚಾದರ್ ತೊಟ್ಟಿದ್ದಾರೆ.

ADVERTISEMENT

ಸಾಂಪ್ರದಾಯಿಕ ಸೀರೆ–ರವಿಕೆ ತೊಟ್ಟ, ಮಧುಮಗಳಂತೆ ಅಲಂಕೃಗೊಂಡಿರುವ ಬಿಪಾಶ ಬಸು ಕಂಡು ಅಭಿಮಾನಿಗಳು ಬೆರಾಗಿದ್ದಾರೆ. ಈ ಫೊಟೊಗಳು ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.