ADVERTISEMENT

ಕೇಶವಿನ್ಯಾಸಕ ಮಿಲನ್ ಜಾಧವ್ ನಿಧನಕ್ಕೆ ಕಂಬನಿ ಮಿಡಿದ ಅಕ್ಷಯ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2022, 9:47 IST
Last Updated 12 ಸೆಪ್ಟೆಂಬರ್ 2022, 9:47 IST
ಅಕ್ಷಯ್‌ ಕುಮಾರ್‌ (ಪಿಟಿಐ ಚಿತ್ರ)
ಅಕ್ಷಯ್‌ ಕುಮಾರ್‌ (ಪಿಟಿಐ ಚಿತ್ರ)   

ಮುಂಬೈ: ಕೇಶವಿನ್ಯಾಸ ಮಿಲನ್‌ ಜಾಧವ್‌ ನಿಧನಕ್ಕೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಕಂಬನಿ ಮಿಡಿದಿದ್ದಾರೆ.

ತಮ್ಮೊಂದಿಗೆ ಕೆಲಸ ಮಾಡಿದ್ದ ಮಿಲನ್‌ ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅಕ್ಷಯ್‌,'ಆಕರ್ಷಕ ಕೇಶವಿನ್ಯಾಸ ಮತ್ತು ನಗುಮುಖದೊಂದಿಗೆ ಜನಸಂದಣಿಯಿಂದದೂರ ನಿಲ್ಲುತ್ತಿದ್ದಿರಿ. ನನ್ನ ಒಂದೇ ಒಂದು ಕೂದಲೂ ಆಚೀಚೆ ಕದಲಲು ನೀವು ಬಿಡುತ್ತಿರಲಿಲ್ಲ. 15 ವರ್ಷಗಳಿಗೂ ಹೆಚ್ಚು ಸಮಯದಿಂದ ನನ್ನ ಕೇಶ ವಿನ್ಯಾಸಕರಾಗಿದ್ದಿರಿ ಮಿಲನ್‌ ಜಾಧವ್. ನಮ್ಮನ್ನು ಬಿಟ್ಟು ಹೋಗಿದ್ದೀರಿ ಎಂಬುದನ್ನು ಈಗಲೂ ನಂಬಲು ಆಗುತ್ತಿಲ್ಲ. ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ಓಂ ಶಾಂತಿ' ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್‌ ಪೋಸ್ಟ್‌ ಅವರ ಅಭಿಮಾನಿಗಳು ಮತ್ತು ಕಲಾವಿದರು ಪ್ರತಿಕ್ರಿಯಿಸಿದ್ದು, ಮಿಲನ್‌ ಜಾಧವ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ADVERTISEMENT

ಅಕ್ಷಯ್‌ ಕುಮಾರ್‌ ಅವರ ಮುಂದಿನ ಸಿನಿಮಾ 'ರಾಮ್‌ ಸೇತು' ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿಅಕ್ಷಯ್‌ಗೆ ನಟಿ ಜಾಕ್ವೆಲಿನಾ ಫರ್ನಾಂಡೀಸ್‌ ಜೊತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.