ADVERTISEMENT

ಬಾಲಿವುಡ್ ನಟ ರಣವೀರ್‌ ಸಿಂಗ್‌ಗೆ ಬೆದರಿಕೆ ಸಂದೇಶ: ಹಣ ನೀಡುವಂತೆ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 6:05 IST
Last Updated 11 ಫೆಬ್ರುವರಿ 2026, 6:05 IST
ರಣವೀರ್ ಸಿಂಗ್
ರಣವೀರ್ ಸಿಂಗ್   

ಕೋಟ್ಯಂತರ ರೂಪಾಯಿ ಹಣ ನೀಡುವುಂತೆ ಬಾಲಿವುಡ್ ನಟ ರಣವೀರ್‌ ಸಿಂಗ್‌ಗೆ ಅಪರಿಚಿತರಿಂದ ಬೆದರಿಕೆ ಸಂದೇಶ ಬಂದಿದೆ.

ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ನೋಟ್‌ ಕಳಿಸುವ ಮೂಲಕ ಬೆದರಿಕೆಯೊಡ್ಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿ ಖ್ಯಾತ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು.

‘ರಣವೀರ್ ಸಿಂಗ್ ಅವರ ಮನೆಯ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆ ಸಂದೇಶ ಕಳುಹಿಸಿದವರನ್ನು ಪತ್ತೆಹಚ್ಚಲಾಗುತ್ತಿದೆ. ಸುಲಿಗೆ ಮಾಡುವ ಉದ್ದೇಶದಿಂದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ಬೆದರಿಕೆಯ ಸಂದೇಶ ಕಳುಹಿಸಿರಬಹುದು’ ಎಂದು ಮುಂಬೈನ ಅಪರಾಧ ವಿಭಾಗದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ADVERTISEMENT

2025ರಲ್ಲಿ ಬಿಡುಗಡೆಯಾದ ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಸಿನಿಮಾ ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್ ಸಿನಿಮಾ ಎನ್ನುವ ಖ್ಯಾತಿ ಗಳಿಸಿದೆ. ಗೂಢಚಾರಿ ಹಮ್ಹಾ ಅಲಿ ಮಜಾರಿ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದರು. ಚಿತ್ರದಲ್ಲಿ ಆರ್. ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್‌ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.