ADVERTISEMENT

ಗೋವಾ ಸಿಎಂ ಪ್ರಮೋದ್‌ ಸಾವಂತ್‌– ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2023, 10:48 IST
Last Updated 22 ನವೆಂಬರ್ 2023, 10:48 IST
<div class="paragraphs"><p>ಪ್ರಮೋದ್‌ ಸಾವಂತ್‌–&nbsp;ನಟ ಸಲ್ಮಾನ್ ಖಾನ್‌</p></div>

ಪ್ರಮೋದ್‌ ಸಾವಂತ್‌– ನಟ ಸಲ್ಮಾನ್ ಖಾನ್‌

   

ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರನ್ನು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಭೇಟಿಯಾಗಿದ್ದಾರೆ.

ಇಬ್ಬರು ಭೇಟಿಯಾಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಮೋದ್‌ ಸಾವಂತ್‌ ಹಂಚಿಕೊಂಡಿದ್ದಾರೆ.

ADVERTISEMENT

ನಗರದಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಸವಂತ್‌– ಸಲ್ಮಾನ್‌ ಭೇಟಿ ಮಾಡಿದ್ದಾರೆ. ‘ಬಾಲಿವುಡ್‌ ಮೆಗಾಸ್ಟಾರ್‌ ಅವರನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಯಿತು ಎಂದು ಸಾವಂತ್‌ ಹೇಳಿದ್ದಾರೆ‘

ಗೋವಾದಲ್ಲಿ ನವೆಂಬರ್‌ 20ರಿಂದ ಆರಂಭವಾಗಿರುವ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ಸಲ್ಮಾನ್‌ ಖಾನ್‌ ಅವರು ಮಂಗಳವಾರ ಭಾಗಿಯಾಗಿದ್ದರು. ನಂತರ ಸಲ್ಮಾನ್‌ ಖಾನ್‌ ಅವರು ಸಾವಂತ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನ.20ರಿಂದ ಆರಂಭವಾಗಿದ್ದು, 9 ದಿನ ಚಲನಚಿತ್ರೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.