ADVERTISEMENT

ಮುಂಬೈನಲ್ಲಿ ₹87 ಕೋಟಿಗೆ ಎರಡು ಐಷಾರಾಮಿ ಫ್ಲ್ಯಾಟ್ ಖರೀದಿಸಿದ ನಟ ವರುಣ್ ಧವನ್

ಪಿಟಿಐ
Published 8 ಜನವರಿ 2025, 15:54 IST
Last Updated 8 ಜನವರಿ 2025, 15:54 IST
<div class="paragraphs"><p>ವರುಣ್ ಧವನ್</p></div>

ವರುಣ್ ಧವನ್

   

ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಅವರು ಮುಂಬೈನ ಜುಹು ಪ್ರದೇಶದಲ್ಲಿ ₹87 ಕೋಟಿ ಕೊಟ್ಟು ಎರಡು ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.

ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ವರುಣ್ ಧವನ್ ಅವರ ಫ್ಲ್ಯಾಟ್ ನೋಂದಣಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದೆ.

ADVERTISEMENT

ಹೈಪ್ರೊಫೈಲ್ ಸೆಲೆಬ್ರಿಟಿಗಳಿರುವ ‘ಟ್ವೆಂಟಿ ಬೈ ಡಿ‘ಡೆಕೋರ್’ ವಸತಿ ಸಮುಚ್ಛಯದ 6ನೇ ಮಹಡಿಯಲ್ಲಿ ತಾಯಿ ಜೊತೆ ಮತ್ತು 7ನೇ ಮಹಡಿಯಲ್ಲಿ ಪತ್ನಿ ನತಾಶಾ ಜೊತೆ ಜಂಟಿಯಾಗಿ ಒಟ್ಟು ₹86.92 ಕೋಟಿಗೆ ಐಷಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ’ ಎಂದು ಸ್ಕ್ವೇರ್ ಯಾರ್ಡ್ಸ್ ಹೇಳಿದೆ.

ತಾಯಿ ಜೊತೆ ಖರೀದಿಸಿರುವ 4,617 ಚದರಡಿಯ ಫ್ಲ್ಯಾಟ್ ಮೌಲ್ಯ ₹42.20 ಕೋಟಿಯಾಗಿದ್ದು, ಪತ್ನಿ ಜೊತೆ ಜಂಟಿಯಾಗಿ ಖರೀದಿಸಿರುವ 5,624 ಚದರಡಿಯ ಫ್ಲ್ಯಾಟ್ ಮೌಲ್ಯ ₹44.52 ಕೋಟಿಯಾಗಿದೆ. ಎರಡೂ ಫ್ಲ್ಯಾಟ್‌ಗಳ ನೋಂದಣಿ ಜನವರಿಯಲ್ಲೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.