ADVERTISEMENT

‘2024 ಈಗ ಆರಂಭ ಎನ್ನುವ ಭಾವ’: ತಿರುಪತಿ ದೇವಾಲಯಕ್ಕೆ ನಟಿ ಜಾಹ್ನವಿ ಕಪೂರ್‌ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2024, 11:36 IST
Last Updated 5 ಜನವರಿ 2024, 11:36 IST
<div class="paragraphs"><p>ನಟಿ ಜಾಹ್ನವಿ ಕಪೂರ್‌</p></div>

ನಟಿ ಜಾಹ್ನವಿ ಕಪೂರ್‌

   

ಇನ್‌ಸ್ಟಾಗ್ರಾಮ್‌ ಚಿತ್ರ

ಆಂಧ್ರಪ್ರದೇಶ: ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಶುಕ್ರವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಗೆಳೆಯ ಶಿಖರ್‌ ಪಹರಿಯಾ, ಮಾಜಿ ನಟಿ ಮಹೇಶ್ವರಿ ಅವರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾರೆ.

ADVERTISEMENT

ಈ ಬಗ್ಗೆ ಜಾಹ್ನವಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ‘ಈಗ 2024ರ ಆರಂಭ ಎನ್ನುವ ಅನುಭವವಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. 

ಗೋಲ್ಡನ್‌ ಕಲರ್‌ ಸೀರೆಯುಟ್ಟು ದೇವಾಲಯದಲ್ಲಿ ನಿಂತ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಕಾಫಿ ವಿತ್‌ ಕರಣ್‌– 8 ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾಹ್ನವಿ ಅವರು, ಶಿಖರಿಯಾ ಅವರೊಂದಿಗೆ ಡೇಟ್‌ ಮಾಡುತ್ತಿದ್ದೀರಾ? ಅಥವಾ ಯಾರೊಂದಿಗಾದರೂ ಡೇಟ್‌ ಮಾಡಿದ್ದೀರಾ ಎನ್ನುವ ಪ್ರಶ್ನೆಗೆ, ‘ಶಿಖರ್‌ ಅವರು ನನಗೆ ಮಾತ್ರವಲ್ಲ, ನನ್ನ ಇಡೀ ಕುಟುಂಬದವರಿಗೆ ಉತ್ತಮ ಸ್ನೇಹಿತ. ಶಿಖರ್‌ ಯಾವಾಗಲೂ ನನಗೋಸ್ಕರ Nadaan Parindey Ghar Aaja?  ಹಾಡನ್ನು ಹಾಡುತ್ತಾರೆ. ಅವರು ನನ್ನಿಂದ ಏನನ್ನಾದರೂ ನಿರೀಕ್ಷಿಸುತ್ತಾರೆ ಎಂದು ಅನಿಸುತ್ತಿಲ್ಲ, ನಿಸ್ವಾರ್ಥದ ಮನೋಭಾವ ಹೊಂದಿರುವ ಅವರು, ನನ್ನನ್ನು ಗೌರವಯುತವಾಗಿ ಕಾಣುತ್ತಾರೆ’ ಎಂದು ಉತ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.