ADVERTISEMENT

ಕಣ್ಣಿನ ತುರ್ತು ಶಸ್ತ್ರಚಿಕಿತ್ಸೆ ಸಲುವಾಗಿ ಅಮೆರಿಕಕ್ಕೆ ತೆರಳಿದ ಶಾರುಕ್ ಖಾನ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2024, 3:47 IST
Last Updated 31 ಜುಲೈ 2024, 3:47 IST
<div class="paragraphs"><p>ಶಾರುಕ್ ಖಾನ್</p></div>

ಶಾರುಕ್ ಖಾನ್

   

ಪಿಟಿಐ ಚಿತ್ರ

ನವದೆಹಲಿ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರು ತುರ್ತಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಲುವಾಗಿ ಅಮೆರಿಕಕ್ಕೆ ಮಂಗಳವಾರ ತೆರಳಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಖಾನ್‌ ಅವರು ಮುಂಬೈನಲ್ಲಿ ಕಣ್ಣಿನ ಚಿಕಿತ್ಸೆ ಪಡೆದಿದ್ದರು. ಆದರೆ, ಚಿಕಿತ್ಸೆಯು ಅಂದುಕೊಂಡಂತೆ ಆಗಿರಲಿಲ್ಲ. ಹೀಗಾಗಿ ಹಾನಿ ಸರಿಪಡಿಸುವ ಸಲುವಾಗಿ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ ಎಂದು 'ಬಾಲಿವುಡ್‌ ಹಂಗಾಮ' ವರದಿ ಮಾಡಿದೆ.

ಯಾವ ಚಿಕಿತ್ಸೆ ಪಡೆದಿದ್ದರು, ಸಮಸ್ಯೆ ಏನಾಗಿದೆ ಎಂಬುದು ಬಹಿರಂಗವಾಗಿಲ್ಲ.

ಖಾನ್‌, ಈ ವರ್ಷ ಮೇ ತಿಂಗಳಲ್ಲೂ ಆಸ್ಪತ್ರೆಗೆ ದಾಖಲಾಗಿದ್ದರು. ಐಪಿಎಲ್‌ ವೀಕ್ಷಣೆಗೆ ಅಹಮದಾಬಾದ್‌ಗೆ ಹೋಗಿದ್ದ ವೇಳೆ ಶಾಖಾಘಾತಕ್ಕೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.